alex Certify ಇಂಡಿಗೋ ಪ್ರಯಾಣಿಕರಿಂದ ಕ್ಯೂಟ್ ಚಾರ್ಜ್ ವಸೂಲಿ: ಏರ್ ಟಿಕೆಟ್ ದರದ ಫೋಟೋ ವೈರಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಡಿಗೋ ಪ್ರಯಾಣಿಕರಿಂದ ಕ್ಯೂಟ್ ಚಾರ್ಜ್ ವಸೂಲಿ: ಏರ್ ಟಿಕೆಟ್ ದರದ ಫೋಟೋ ವೈರಲ್..!

ಇತ್ತೀಚೆಗೆ, ಇಂಡಿಗೋ ತಮ್ಮ ಏರ್‌ಲೈನ್ ಟಿಕೆಟ್‌ಗಳಲ್ಲಿ ‘ಕ್ಯೂಟ್ ಶುಲ್ಕ’ ವಿಧಿಸಿರುವುದನ್ನು ಗಮನಿಸಿದ ನಂತರ ಹಲವಾರು ಪ್ರಯಾಣಿಕರು ಗೊಂದಲಕ್ಕೊಳಗಾಗಿದ್ದರು. ಇಂಡಿಗೋ ‘ಕ್ಯೂಟ್ ಶುಲ್ಕ’ ವಿಧಿಸಿದೆ ಎಂದು ಬಳಕೆದಾರರು ತಮ್ಮ ವಿಮಾನ ಟಿಕೆಟ್‌ಗಳ ಬೆಲೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕ್ಯೂಟ್ ಚಾರ್ಜ್ ಎಂದು 100 ರೂ.ಗಳನ್ನು ವಸೂಲಿ ಮಾಡಲಾಗಿದ್ದು, ಇದರ ಅರ್ಥವೇನೆಂದು ಅಂತರ್ಜಾಲದಲ್ಲಿ ಗೊಂದಲ ಮೂಡಿಸಿದೆ. ಟ್ವೀಟ್ ಕೂಡ ಇದೇ ರೀತಿಯ ವಿನೋದಕರ ಪ್ರತಿಕ್ರಿಯೆಗಳ ಸುರಿಮಳೆಗೆ ಕಾರಣವಾಯಿತು. ಅನೇಕರು ತಮ್ಮ ಟಿಕೆಟ್ ದರದ ಇದೇ ರೀತಿಯ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಶಂತನು ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಬೆಲೆ ಸಾರಾಂಶವನ್ನು ಹಂಚಿಕೊಂಡಿದ್ದಾರೆ. ತಾನು ವಯಸ್ಸಿಗೆ ತಕ್ಕಂತೆ ಮುದ್ದಾಗಿದ್ದೇನೆ ಎಂದು ತನಗೆ ತಿಳಿದಿದೆ. ಆದರೆ, ಇಂಡಿಗೋ ತನಗೆ ಶುಲ್ಕ ವಿಧಿಸಲು ಪ್ರಾರಂಭಿಸುತ್ತದೆ ಎಂದು ಭಾವಿಸಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಫೋಟೋದಲ್ಲಿ ಸಾಮಾನ್ಯ ವಿಮಾನ ದರವನ್ನು ಒಳಗೊಂಡಿರುವ ಶುಲ್ಕದ ವಿವರವನ್ನು ತೋರಿಸಲಾಗಿದೆ. ಶುಲ್ಕಗಳು, ಆಸನ ಶುಲ್ಕಗಳು, ಭದ್ರತೆ ಮತ್ತು ಅನುಕೂಲತೆ, ಜೊತೆಗೆ ಮುದ್ದಾಗಿರುವುದಕ್ಕೆ 100 ರೂ. ಶುಲ್ಕ ವಿಧಿಸಲಾಗಿದೆ.

ಕ್ಯೂಟ್ ಶುಲ್ಕ ಎಂದರೇನು?

ಅಂದಹಾಗೆ ಇಲ್ಲಿ ಕ್ಯೂಟ್ (Cute) ಎಂದರೆ ಸಾಮಾನ್ಯ ಬಳಕೆದಾರ ಟರ್ಮಿನಲ್ ಸಲಕರಣೆ ಎಂಬುದಾಗಿದೆ. ಇದು ವಿಮಾನ ನಿಲ್ದಾಣದಲ್ಲಿ ಲೋಹ ಪತ್ತೆ ಮಾಡುವ ಯಂತ್ರಗಳು, ಎಸ್ಕಲೇಟರ್‌ಗಳು ಮತ್ತು ಇತರ ಉಪಕರಣಗಳನ್ನು ಬಳಸುವುದಕ್ಕಾಗಿ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ವಿಧಿಸಲಾಗುವ ಮೊತ್ತವಾಗಿದೆ. ಟ್ವೀಟ್‌ಗಳಲ್ಲಿ ಒಂದಕ್ಕೆ ಪ್ರತಿಕ್ರಿಯಿಸಿರುವ ಇಂಡಿಗೋ, ಸಂಸ್ಥೆ “ಸಾಮಾನ್ಯ ಬಳಕೆದಾರ ಟರ್ಮಿನಲ್ ಸಲಕರಣೆಗಳ (CUTE) ಸೇವೆಗಳ ಬಳಕೆಗಾಗಿ ಆಯ್ದ ವಿಮಾನ ನಿಲ್ದಾಣಗಳಲ್ಲಿ ಕ್ಯೂಟ್ ಶುಲ್ಕಗಳನ್ನು ವಿಧಿಸಲಾಗುತ್ತದೆ ಎಂಬುದನ್ನು ದಯವಿಟ್ಟು ತಿಳಿಯಿರಿ” ಎಂದು ಟ್ವೀಟ್ ಮಾಡಿದೆ. ಇದೀಗ ಕ್ಯೂಟ್ ಪೂರ್ಣ ಅರ್ಥ ಕೇಳಿ ಶಾಕ್ ಆಗೋ ಸರದಿ ಪ್ರಯಾಣಿಕರದ್ದು..!

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...