alex Certify BIG NEWS: ದೇಶದಲ್ಲಿ ಹೆಚ್ಚಾದ ನಿರುದ್ಯೋಗ, ದೇಶದ ಆರ್ಥಿಕತೆ ಮೇಲೆ ಒಮಿಕ್ರಾನ್ ಪ್ರಭಾವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದಲ್ಲಿ ಹೆಚ್ಚಾದ ನಿರುದ್ಯೋಗ, ದೇಶದ ಆರ್ಥಿಕತೆ ಮೇಲೆ ಒಮಿಕ್ರಾನ್ ಪ್ರಭಾವ

2021 ರ ನವೆಂಬರ್ ಮತ್ತು ಅಕ್ಟೋಬರ್‌ ತಿಂಗಳಿಗೆ ಹೋಲಿಸಿದರೆ, ಡಿಸೆಂಬರ್ ನಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ. ನವೆಂಬರ್ ನಲ್ಲಿ‌ 7%, ಅಕ್ಟೋಬರ್ 7.75% ಇದ್ದ ನಿರುದ್ಯೋಗ ದರ ಕಳೆದ ನಾಲ್ಕು ತಿಂಗಳಲ್ಲಿ ಗರಿಷ್ಠ ಏರಿಕೆ ಕಂಡಿದೆ. ಡಿಸೆಂಬರ್ ತಿಂಗಳಲ್ಲಿ ನಿರುದ್ಯೋಗ ದರ 7.91% ತಲುಪಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಮಾಹಿತಿ ನೀಡಿದೆ.

ಡಿಸೆಂಬರ್‌ನಲ್ಲಿ ನಗರದ ನಿರುದ್ಯೋಗ ದರವು 9.30% ಕ್ಕೆ ಏರಿಕೆಯಾಗಿದ್ದು, ಗ್ರಾಮೀಣ ನಿರುದ್ಯೋಗ ದರ 7.28% ರಷ್ಟಿದೆ. ನಗರ ಮತ್ತು ಗ್ರಾಮೀಣ ನಿರುದ್ಯೋಗವು ಹಿಂದಿನ ತಿಂಗಳಲ್ಲಿ ಕ್ರಮವಾಗಿ 8.21% ಮತ್ತು 6.44% ಇತ್ತು.‌ ಪ್ರಪಂಚದಾದ್ಯಂತ ಒಮಿಕ್ರಾನ್ ರೂಪಾಂತರದ ಕಪ್ಪು ಛಾಯೆ ಇದೆ, ಜೊತೆಗೆ ಕೊರೋನಾ ಪ್ರಕರಣಗಳಲ್ಲು ಏರಿಕೆ ಕಂಡಿರುವುದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದ್ದು ನಿರುದ್ಯೋಗ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಿದೆ.

ನಿರುದ್ಯೋಗ ದರವು ಆಗಸ್ಟ್‌ನಲ್ಲಿ 8.3% ತಲುಪಿತ್ತು, ಸೆಕೆಂಡ್ ವೇವ್ ಇದ್ದ ಕಾರಣ ಈ ಅಂಕಿಅಂಶ ಕಂಡು ಬಂದಿತ್ತು. ಈಗ ಒಮಿಕ್ರಾನ್ ಜೊತೆಗೆ ಮೂರನೇ ಅಲೆಯ ಆತಂಕವು ಇರುವುದರಿಂದ ದೇಶದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಆಗುವ ಸಾಧ್ಯತೆಯಿದೆ. ಆ ವೇಳೆ ನಿರುದ್ಯೋಗ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...