alex Certify ಯುವಜನತೆಗೆ ಗುಡ್ ನ್ಯೂಸ್: ದೇಶದ ಮೊದಲ ‘ಸ್ಕಿಲ್ ಇಂಪ್ಯಾಕ್ಟ್ ಬಾಂಡ್’ ಪ್ರಾರಂಭ; 50 ಸಾವಿರ ಯುವಕರಿಗೆ ಅನುಕೂಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಜನತೆಗೆ ಗುಡ್ ನ್ಯೂಸ್: ದೇಶದ ಮೊದಲ ‘ಸ್ಕಿಲ್ ಇಂಪ್ಯಾಕ್ಟ್ ಬಾಂಡ್’ ಪ್ರಾರಂಭ; 50 ಸಾವಿರ ಯುವಕರಿಗೆ ಅನುಕೂಲ

ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್(ಎನ್‌ಎಸ್‌ಡಿಸಿ) ಮಂಗಳವಾರ ಜಾಗತಿಕ ಪಾಲುದಾರರ ಸಹಯೋಗದೊಂದಿಗೆ ಭಾರತದಲ್ಲಿ ಕೌಶಲ್ಯಕ್ಕಾಗಿ ಮೊದಲ ಅತಿದೊಡ್ಡ ‘ಸ್ಕಿಲ್ ಇಂಪ್ಯಾಕ್ಟ್ ಬಾಂಡ್’ ಬಿಡುಗಡೆ ಮಾಡಿದೆ.

ಉಬರ್ ಚಾಲಕನಿಗೆ ಲಾಟರಿಯಲ್ಲಿ ಬಂತು ಇಷ್ಟೊಂದು ಹಣ

ಇದು 14.4 ಮಿಲಿಯನ್ ಅಮೆರಿಕನ್ ಡಾಲರ್ ನಿಧಿಯನ್ನು ಒಳಗೊಂಡಿದ್ದು, 50,000 ಯುವಕರಿಗೆ ಪ್ರಯೋಜನ ಸಿಗಲಿದೆ. ಉದ್ಯೋಗಾವಕಾಶ ಕೂಡ ಸಿದ್ಧವಾಗಿರಲಿವೆ.

NSDC ಜೊತೆಗೆ, ಜಾಗತಿಕ ಒಕ್ಕೂಟವು HRH ಪ್ರಿನ್ಸ್ ಚಾರ್ಲ್ಸ್ ಅವರ ಬ್ರಿಟಿಷ್ ಏಷ್ಯನ್ ಟ್ರಸ್ಟ್, ಮೈಕೆಲ್ ಮತ್ತು ಸುಸಾನ್ ಡೆಲ್ ಫೌಂಡೇಶನ್(MSDF), ದಿ ಚಿಲ್ಡ್ರನ್ಸ್ ಇನ್ವೆಸ್ಟ್‌ಮೆಂಟ್ ಫಂಡ್ ಫೌಂಡೇಶನ್(CIFF), HSBC ಇಂಡಿಯಾ, JSW ಫೌಂಡೇಶನ್ ಮತ್ತು ದುಬೈ ಕೇರ್ಸ್, FCDO(UK ಸರ್ಕಾರ) ಒಳಗೊಂಡಿದೆ. ) ಮತ್ತು USAID ತಾಂತ್ರಿಕ ಪಾಲುದಾರರಾಗಿರಲಿದೆ.

ಕೆಲಸದ ಆಮಿಷವೊಡ್ಡಿ ವಂಚನೆ, ಅತ್ಯಾಚಾರ ಆರೋಪ; ಸ್ಯಾಂಡಲ್ ವುಡ್ ನಟ ಅರೆಸ್ಟ್

ಸ್ಕಿಲ್ ಇಂಪ್ಯಾಕ್ಟ್ ಬಾಂಡ್(ಎಸ್‌ಐಬಿ) ಸಾರ್ವಜನಿಕ, ಖಾಸಗಿ ಸಹಭಾಗಿತ್ವ ಸಂಸ್ಥೆ ಎನ್‌ಎಸ್‌ಡಿಸಿ ಒಳಗೊಂಡ ಮೊದಲ ಪ್ರಭಾವಿ ಬಾಂಡ್ ಆಗಿದೆ. CIFF, HSBC ಇಂಡಿಯಾ, JSW ಫೌಂಡೇಶನ್ ಮತ್ತು ದುಬೈ ಕೇರ್ಸ್ ಇದಕ್ಕೆ ಬೆಮಬಲ ನೀಡಿವೆ.

ಸೇವಾ ಪೂರೈಕೆದಾರರಿಗೆ ಮುಂಗಡ ಬಂಡವಾಳ ಒದಗಿಸಲು 4 ಮಿಲಿಯನ್ ಡಾಲರ್‌ಗಳನ್ನು ನೀಡಲಾಗುವುದು. ಬಾಂಡ್‌ನ ಜೀವಿತಾವಧಿಯಲ್ಲಿ ಪ್ರೋಗ್ರಾಂ ಅನ್ನು ನಾಲ್ಕು ವರ್ಷಗಳಲ್ಲಿ ಕಾರ್ಯಗತಗೊಳಿಸಬೇಕಿದೆ. ಹೂಡಿಕೆದಾರರ ನಿಧಿಯನ್ನು ಪ್ರತಿ ವರ್ಷ ಮರುಹೂಡಿಕೆ ಮಾಡಲಾಗುತ್ತದೆ.

ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ 50,000 ಯುವಜನರಿಗೆ ಪ್ರಯೋಜನವಾಗಲು ಒಕ್ಕೂಟವು 14.4 ಮಿಲಿಯನ್ ಡಾಲರ್ ನಿಧಿ ಒಟ್ಟುಗೂಡಿಸಿದೆ. ಶೇಕಡ 60 ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಸೌಲಭ್ಯ ನೀಡುವ ಗುರಿ ಇದೆ. ಅವರಿಗೆ ಕೌಶಲ್ಯ ಮತ್ತು ವೃತ್ತಿಪರ ತರಬೇತಿ, ಚಿಲ್ಲರೆ ವ್ಯಾಪಾರ, ಉಡುಪು, ಆರೋಗ್ಯ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಕೋವಿಡ್ -19 ಚೇತರಿಕೆ ವಲಯಗಳಲ್ಲಿ ವೇತನ-ಉದ್ಯೋಗಕ್ಕೆ ಪ್ರವೇಶವನ್ನು ಒದಗಿಸುವ ಉದ್ದೇಶವಿದೆ.

ಸ್ಕಿಲ್ ಇಂಪ್ಯಾಕ್ಟ್ ಬಾಂಡ್ NSDC ಮತ್ತು ಪ್ರಮುಖ ಜಾಗತಿಕ ಸಂಸ್ಥೆಗಳು ಭಾರತದಲ್ಲಿ ಕೌಶಲ್ಯ ಸುಧಾರಿಸಲು ಸಹಯೋಗದ ಪ್ರಯತ್ನ ಇದಾಗಿದೆ. ವಿಶೇಷವಾಗಿ ಮಹಿಳೆಯರ ಜೀವನದಲ್ಲಿ ಪರಿವರ್ತನೆಯ ಪ್ರಭಾವವನ್ನು ಬೀರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಎನ್‌ಎಸ್‌ಡಿಸಿ ಅಧ್ಯಕ್ಷ ಎ.ಎಂ. ನಾಯಕ್ ಹೇಳಿದರು.

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ಅಪೊಲೊ ಮೆಡ್‌ಸ್ಕಿಲ್ಸ್ ಲಿಮಿಟೆಡ್, ಗ್ರಾಮ ತರಂಗ್ ಎಂಪ್ಲಾಯಬಿಲಿಟಿ ಟ್ರೈನಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಲರ್ನೆಟ್ ಸ್ಕಿಲ್ಸ್ ಲಿಮಿಟೆಡ್, ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಮತ್ತು ಪ್ಯಾನ್‌ ಐಐಟಿ ಅಲುಮ್ನಿ ಫೌಂಡೇಶನ್ ಸೇರಿದಂತೆ ಎನ್‌ಎಸ್‌ಡಿಸಿಯ ಸಂಯೋಜಿತ ತರಬೇತಿ ಪಾಲುದಾರರ ಮೂಲಕ ತರಬೇತಿ ನೀಡಲಾಗುತ್ತದೆ.

ಯುವಕರ ಉದ್ಯೋಗ ಬಿಕ್ಕಟ್ಟನ್ನು ಪರಿಹರಿಸುವುದು, ನಿರ್ದಿಷ್ಟವಾಗಿ ಯುವತಿಯರಿಗೆ ತರಬೇತಿ ಅವಕಾಶ ನೀಡುವುದು, ಸಾಂಕ್ರಾಮಿಕ ರೋಗವು ಮಹಿಳೆಯರು ಮತ್ತು ಉದ್ಯೋಗದ ಮೇಲೆ ಬೀರುವ ಋಣಾತ್ಮಕ ಪರಿಣಾಮಕ್ಕೆ ತುರ್ತು ಪ್ರತಿಕ್ರಿಯೆ ಇದಾಗಿದೆ ಎಂದು ಹೇಳಲಾಗಿದೆ.

ತಾಯಿ-ಅತ್ತೆಯೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ ವರ: ವಿಡಿಯೋ ವೈರಲ್

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಭಾರತೀಯರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ತಕ್ಷಣದ ಬಿಕ್ಕಟ್ಟಿನಲ್ಲಿ ವಯಸ್ಕರಿಗಿಂತ(25 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಯುವಕರು ಹೆಚ್ಚು ಹಾನಿಗೊಳಗಾಗಿದ್ದಾರೆ. ಅಂತಹವರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.

ಲಾಕ್‌ಡೌನ್ ಸಮಯದಲ್ಲಿ ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರ ಜೊತೆಗೆ, ದಕ್ಷಿಣ ಏಷ್ಯಾದಲ್ಲಿ ಭಾರತದಲ್ಲಿ ಶೇಕಡ 20.3 ರಷ್ಟು ಕಡಿಮೆ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಹೊಂದಿದೆ. ಇದಕ್ಕೆ ಕೌಶಲ್ಯದ ಕೊರತೆ ಕೂಡ ಕಾರಣವಾಗಿದೆ. ಕೌಶಲ ಕಾರ್ಯಕ್ರಮಗಳಿಗೆ ದಾಖಲಾದ ಪ್ರತಿ 100 ಮಹಿಳೆಯರಲ್ಲಿ ಕೇವಲ 10 ಮಂದಿ ಮಾತ್ರ 3 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಕೌಶಲ್ಯದ ನಂತರದ ಉದ್ಯೋಗಗಳಲ್ಲಿ ಇರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...