alex Certify ಭಾರತೀಯರಿಗೆ ಕೊರೊನಾ ಬೋಸ್ಟರ್ ಡೋಸ್ ಅಗತ್ಯವಿದ್ಯಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯರಿಗೆ ಕೊರೊನಾ ಬೋಸ್ಟರ್ ಡೋಸ್ ಅಗತ್ಯವಿದ್ಯಾ….?

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಕೇರಳದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ದೇಶದ ಒಟ್ಟೂ ಸೋಂಕಿತರ ಸಂಖ್ಯೆಯಲ್ಲಿ ಶೇಕಡಾ 52ರಷ್ಟು ಕೇರಳದಿಂದ ಬರ್ತಿದೆ. ಹಬ್ಬಗಳು ಶುರುವಾಗ್ತಿರುವ ಕಾರಣ, ಕೊರೊನಾ ಬಗ್ಗೆ ಮತ್ತಷ್ಟು ಭಯ ಶುರುವಾಗಿದೆ. ಕೊರೊನಾ ಮೂರನೇ ಅಲೆ ಮಧ್ಯೆ ಬೂಸ್ಟರ್ ಡೋಸ್ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹಾನಿರ್ದೇಶಕ ಬಲರಾಮ್ ಭಾರ್ಗವ ಮಹತ್ವದ ಮಾಹಿತಿ ನೀಡಿದ್ದಾರೆ. ಹಬ್ಬಗಳು ಬರುತ್ತಿವೆ. ಜನರು ಊರುಗಳಿಗೆ ಹೋಗ್ತಿದ್ದಾರೆ. ಊರಿಗೆ ಹೋಗುವ ಜನರು ಸಾರ್ವಜನಿಕ ಸಾರಿಗೆ ಬದಲು ಖಾಸಗಿ ವಾಹನ ಬಳಸಿದ್ರೆ ಸುರಕ್ಷಿತವೆಂದು ಅವರು ಹೇಳಿದ್ದಾರೆ. ಅಲ್ಲದೆ ಹಬ್ಬವನ್ನು ಸರಳವಾಗಿ ಆಚರಿಸಿ ಎಂದವರು ಹೇಳಿದ್ದಾರೆ.

ಭಾರ್ಗವ, ಬೂಸ್ಟರ್ ಡೋಸ್ ಬಗ್ಗೆ ಉದ್ಭವಿಸಿರುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಬೂಸ್ಟರ್ ಡೋಸ್ ಈಗ ಪ್ರಾಮುಖ್ಯತೆ ಹೊಂದಿಲ್ಲ. ಈಗ ಎರಡು ಡೋಸ್‌ಗಳನ್ನು ಪೂರ್ಣಗೊಳಿಸುವುದು ಹೆಚ್ಚು ಮುಖ್ಯವಾಗಿದೆ. ಕೆಲವು ರಾಜ್ಯಗಳಲ್ಲಿ, ಒಂದು ಅಧ್ಯಯ ನಡೆದಿದೆ. ರೋಗ ನಿರೋಧಕ ಶಕ್ತಿ ದೀರ್ಘಕಾಲ ಇರುತ್ತದೆ ಎಂಬ ಸಂಗತಿ ಅಧ್ಯಯನದಿಂದ ಗೊತ್ತಾಗಿದೆ ಎಂದವರು ಹೇಳಿದ್ದಾರೆ.

ದೇಶದ ಜನಸಂಖ್ಯೆಯ ಶೇಕಡಾ 69ರಷ್ಟು ವಯಸ್ಕರು ಕೊರೊನಾ ಲಸಿಕೆ ಮೊದಲ ಡೋಸ್ ಪಡೆದಿದ್ದಾರೆ. ಶೇಕಡಾ  25ರಷ್ಟು ಜನರು ಲಸಿಕೆಯನ್ನು ಪಡೆದಿದ್ದಾರೆ ಎಂದವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...