alex Certify ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿಚ್ಚಿಸುವ ಭಾರತೀಯರಿಗೆ ಇಲ್ಲಿದೆ ಗುಡ್​ ನ್ಯೂಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿಚ್ಚಿಸುವ ಭಾರತೀಯರಿಗೆ ಇಲ್ಲಿದೆ ಗುಡ್​ ನ್ಯೂಸ್​..!

ಭಾರತದಿಂದ ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವ ಪ್ರಯಾಣಿಕರಿಗೆ ಗುಡ್​ ನ್ಯೂಸ್​ ಒಂದಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಕೊರೊನಾ ಲಸಿಕೆ 2 ಡೋಸ್​ಗಳನ್ನು ಸ್ವೀಕರಿಸಿದವರು ಅರಬ್​ ರಾಷ್ಟ್ರಕ್ಕೆ ಬರಬಹುದು ಎಂದು ಈ ಹಿಂದೆ ಅಮಾನತು ಮಾಡಿದ್ದ ದೇಶಗಳ ಪೈಕಿ 12 ರಾಷ್ಟ್ರಗಳ ಪ್ರಜೆಗಳಿಗೆ ಅನುಮತಿ ನೀಡಿದೆ. ವಿಶೇಷ ಅಂದರೆ ಈ ಹಿಂದೆ ಅರಬ್​ ಪ್ರಯಾಣದಿಂದ ನಿರ್ಬಂಧಕ್ಕೆ ಒಳಪಟ್ಟಿದ್ದ ಭಾರತಕ್ಕೆ ಕೂಡ ಅನುಮತಿ ನೀಡಲಾಗಿದೆ.

ದುಬೈನಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಕಳೆದ 1 ವರ್ಷದಿಂದ ಮುಂದೂಡಲ್ಪಟ್ಟಿದ್ದ ದುಬೈ ವರ್ಲ್ಡ್​ ಎಕ್ಸಪೋ 2020 ಅಕ್ಟೋಬರ್ 1ರಂದು ನಡೆಯಲಿದೆ. ಇದೇ ಕಾರಣಕ್ಕೆ ನಾಳೆಯಿಂದ ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕುವ ನಿರ್ಧಾರಕ್ಕೆ ಅರಬ್​ ರಾಷ್ಟ್ರ ಬಂದಿದೆ.

ಅರಬ್​ ರಾಷ್ಟ್ರಗಳ ಬ್ಯುಸಿನೆಸ್​ ಹಬ್​ಗಳಲ್ಲಿ ಒಂದಾದ ದುಬೈ 1 ವರ್ಷಗಳ ಕಾಯುವಿಕೆಯ ಬಳಿಕ ಇದೀಗ ವರ್ಲ್ಡ್​ ಎಕ್ಸ್​ಪೋಗೆ ಮುಂದಾಗಿದೆ. ಪ್ರಾದೇಶಿಕ ವ್ಯಾಪಾರ ಹಾಗೂ ಪ್ರವಾಸೋದ್ಯಮ ಕೇಂದ್ರವಾದ ದುಬೈ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಈ ಮೇಳವನ್ನು ನಡೆಸುತ್ತದೆ.

ಎಕ್ಸ್​ಪೋ ಸಮಯದಲ್ಲಿ ಕೊರೊನಾ ವೈರಸ್​ ನಿಯಂತ್ರಿಸಲು ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಸಂಘಟಕರು ಹೇಳಿದ್ದಾರೆ.

ಭಾರತವನ್ನು ಹೊರತುಪಡಿಸಿ ಅರಬ್​ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲು ಅನುಮತಿ ಪಡೆದ ರಾಷ್ಟ್ರಗಳ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ನಮೀಬಿಯಾ, ಜಾಂಬಿಯಾ, ಕಾಂಗೋ , ಉಗಾಂಡಾ, ಸಿಯೆರಾ ಲಿಯೋನ್, ಲೈಬೀರಿಯಾ, ದಕ್ಷಿಣ ಆಫ್ರಿಕಾ, ನೈಜಿರೀಯಾ ಹಾಗೂ ಅಫ್ಘಾನಿಸ್ತಾನ ಸೇರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...