alex Certify BIG NEWS: ಸ್ವಿಸ್​ ಬ್ಯಾಂಕ್​ನಲ್ಲಿ ಭಾರತೀಯರ ಠೇವಣಿ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ವಿಸ್​ ಬ್ಯಾಂಕ್​ನಲ್ಲಿ ಭಾರತೀಯರ ಠೇವಣಿ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಹೇಳಿದ್ದೇನು…?

ಸ್ವಿಸ್​ ಬ್ಯಾಂಕ್​​ನಲ್ಲಿ ಭಾರತೀಯ ವ್ಯಕ್ತಿಗಳು ಇಟ್ಟಿರುವ ಹಣದ ಮೊತ್ತ ಏರಿಕೆಯಾಗಿದೆ ಎಂಬ ಹೇಳಿಕೆಯನ್ನ ಕೇಂದ್ರ ಹಣಕಾಸು ಸಚಿವಾಲಯ ತಳ್ಳಿ ಹಾಕಿದೆ.

ಶುಕ್ರವಾರ ಸ್ವಿಡ್ಜರ್​ಲೆಂಡ್​ನ ಕೇಂದ್ರ ಬ್ಯಾಂಕ್​ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಸ್ವಿಸ್​​ ಬ್ಯಾಂಕ್​​ನಲ್ಲಿ ಭಾರತೀಯ ವ್ಯಕ್ತಿಗಳು, ಸಂಸ್ಥೆಗಳು ಇಟ್ಟಿರುವ ಹಣ 20,700 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ ಎಂದು ಮಾಹಿತಿ ನೀಡಿತ್ತು. 2019ರಲ್ಲಿ 6625 ಕೋಟಿ ರೂಪಾಯಿ ಇದ್ದ ಮೊತ್ತ 2020ರ ಅಂತ್ಯದ ವೇಳೆಗೆ ಈ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಸ್ವಿಸ್​ ಬ್ಯಾಂಕ್​ ಒದಗಿಸಿದ ಮಾಹಿತಿಯ ಪ್ರಕಾರ ತಿಳಿದುಬಂದಿತ್ತು.

ಆದರೆ ಸ್ವಿಜರ್​ಲೆಂಡ್​ನಲ್ಲಿ ಭಾರತೀಯರ ಕಪ್ಪು ಹಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಬಗ್ಗೆ ನೀಡಲಾದ ದತ್ತಾಂಶಗಳನ್ನ ಕೇಂದ್ರ ಹಣಕಾಸು ಸಚಿವಾಲಯ ತಳ್ಳಿ ಹಾಕಿದೆ. ಸ್ವಿಸ್​ ಬ್ಯಾಂಕ್​ ಬಿಡುಗಡೆ ಮಾಡಿರುವ ಅಧಿಕೃತ ದತ್ತಾಂಶವು ಭಾರೀ ಚರ್ಚೆಗೆ ಗ್ರಾಸವಾಗಿರುವ ಭಾರತೀಯರು ಹೊಂದಿರುವ ಕಪ್ಪು ಹಣದ ಪ್ರಮಾಣವನ್ನ ಸೂಚಿಸೋದಿಲ್ಲ ಎಂದು ಸಚಿವಾಲಯ ಹೇಳಿದೆ.

ಸ್ವಿಸ್​ ಬ್ಯಾಂಕ್​ ಬಿಡುಗಡೆ ಮಾಡಿರುವ ಈ ಅಂಕಿ ಅಂಶಗಳಲ್ಲಿ ಮೂರನೇ ರಾಷ್ಟ್ರದ ಹೆಸರಿನಲ್ಲಿ ಭಾರತೀಯರು, ಎನ್​ಆರ್​ಐಗಳು ಹಾಗೂ ಇತರರು ಹೊಂದಿರುವ ಹಣದ ಬಗ್ಗೆ ಮಾಹಿತಿ ಒಳಗೊಂಡಿಲ್ಲ ಎಂದು ಸಚಿವಾಲಯ ಹೇಳಿದೆ.

2019ರ ಅಂತ್ಯದಿಂದ ಗ್ರಾಹಕರಿಂದ ಬರಬೇಕಾದ ಇತರೆ ಮೊತ್ತಗಳಲ್ಲಿ ಏರಿಕೆ ಉಂಟಾಗಿದೆ. ಇವೆಲ್ಲವೂ ಬಾಂಡ್​, ಸೆಕ್ಯೂರಿಟಿ ರೂಪದಲ್ಲಿದೆ. ಗ್ರಾಹಕರ ಠೇವಣಿಯು 2019ರ ಅಂತ್ಯದಿಂದ ಕುಸಿತ ಕಂಡಿದೆ.

ಆದರೆ ಭಾರತೀಯ ಕಂಪನಿಗಳು ಹೆಚ್ಚಾದ ವ್ಯಾಪಾರ ವ್ಯವಹಾರ ಹಾಗೂ ಭಾರತ ಮತ್ತು ಸ್ವಿಸ್​ ಬ್ಯಾಂಕ್​ ಶಾಖೆಗಳ ವ್ಯವಹಾರದಿಂದಾಗಿ ಠೇವಣಿಯಲ್ಲಿ ಏರಿಕೆ ಆಗಿರಬಹುದು. ಹೀಗಾಗಿ ಭಾರತೀಯರು ಸ್ವಿಸ್​ ಬ್ಯಾಂಕ್​ ಇಟ್ಟಿರುವ ಹಣದ ಮೊತ್ತ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ಹೇಳಿಕೆ ಸಂಬಂಧ ಅಂಕಿ ಅಂಶಗಳನ್ನ ಒದಗಿಸುವಂತೆ ಸ್ವಿಸ್​ ಬ್ಯಾಂಕ್​ ಬಳಿ ಕೇಂದ್ರ ಸಚಿವಾಲಯ ಮನವಿ ಮಾಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...