alex Certify ಹಸ್ತಾಕ್ಷರ ನೀಡಲು ಏನೂ ಇಲ್ಲದಾಗ ಕೈಗವಸು ತಂದ ರಿಚಾ ಘೋಷ್‌: ನೆಟ್ಟಿಗರಿಂದ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸ್ತಾಕ್ಷರ ನೀಡಲು ಏನೂ ಇಲ್ಲದಾಗ ಕೈಗವಸು ತಂದ ರಿಚಾ ಘೋಷ್‌: ನೆಟ್ಟಿಗರಿಂದ ಶ್ಲಾಘನೆ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಚಾ ಘೋಷ್ ಅವರ ಹಸ್ತಾಕ್ಷರ ಪಡೆದ ಅಭಿಮಾನಿಯೊಬ್ಬನ ಟ್ವಿಟರ್‌ ಈಗ ವೈರಲ್‌ ಆಗಿದೆ. ಇದಕ್ಕೆ ಕಾರಣ ಕುತೂಹಲವಾದದ್ದು.

ವಿನೇಶ್ ಪ್ರಭು ಎಂಬ ಅಭಿಮಾನಿ ಈ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ. ರಿಚಾ ಘೋಷ್‌ ಅಕಸ್ಮಾತ್‌ ಸಿಕ್ಕಾಗ ಆಟೋಗ್ರಾಫ್ ಕೇಳಿದ್ದಾರೆ. ಆದರೆ ಅದನ್ನು ತೆಗೆದುಕೊಳ್ಳಲು ಇವರ ಬಳಿ ಏನೂ ಇರಲಿಲ್ಲ. ನಂತರ ಆಗಿದ್ದೇನು ಎನ್ನುವುದೇ ಅಚ್ಚರಿಯಾಗಿರುವುದು.

ಆಟೋಗ್ರಾಫ್‌ ನೀಡಲು ಏನೂ ಇಲ್ಲದಾಗ ರಿಚಾ ವಿನೇಶ್‌ ಅವರಿಗೆ ಕಾಯುವಂತೆ ಹೇಳಿ ಡ್ರೆಸ್ಸಿಂಗ್ ರೂಮಿನೊಳಗೆ ಹೋಗಿದ್ದಾರೆ. ನಂತರ ಹೊರಗೆ ಬಂದು ಆಟಕ್ಕೆ ಧರಿಸಿರುವ ಕೈಗವಸುಗಳ ಮೇಲೆ ಆಟೋಗ್ರಾಫ್ ನೀಡಿದ್ದಾರೆ. ಇದು ವೈರಲ್‌ ಆಗಿದ್ದು, ರಿಚಾ ಅವರ ಈ ವರ್ತನೆಗೆ ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಈ ಪೋಸ್ಟ್ ಈಗ ವೈರಲ್ ಆಗಿದ್ದು, 66 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. “ರಿಚಾ ಅಭಿಮಾನಿಯಾಗಿರಲು ಹೆಮ್ಮೆಪಡುತ್ತೇನೆ ಮತ್ತು ಸಾಮಾನ್ಯವಾಗಿ ಈ ತಂಡದ ಅಭಿಮಾನಿಯಾಗಲು ಹೆಮ್ಮೆಪಡುತ್ತೇನೆ !” ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...