
ಭಾರತೀಯ ರೈಲ್ವೆಗೆ ಬರೀ ಈ ಐದು ಪ್ರಯಾಣಿಕ ರೈಲುಗಳೇ 100 ಕೋಟಿ ರೂ. ದುಡಿದುಕೊಡುತ್ತಿವೆ. ಕೋವಿಡ್ ಸಂಕಷ್ಟದ ನಡುವೆಯೂ ಪಶ್ಚಿಮ ಕೇಂದ್ರ ರೈಲ್ವೇ ಇಲಾಖೆ ತನ್ನ ಪ್ರಯಾಣಿಕ ರೈಲುಗಳಿಂದ ಸಿಕ್ಕಿರುವ ಆದಾಯದ ಕುರಿತು ಗಮನಾರ್ಹ ಸಂಗತಿಯೊಂದನ್ನು ಹೊರ ಹಾಕಿದೆ.
ಈ ಕುರಿತು ಪಶ್ಚಿಮ ರೈಲ್ವೇ ಪತ್ರಿಕಾ ಪ್ರಕಟಣೆಯೊಂದನ್ನು ಕೊಟ್ಟಿದ್ದು, ಅದರ ಪ್ರಕಾರ ಈ ಕೆಳಕಂಡ ರೈಲುಗಳು ಕಳೆದ ಎಂಟು ತಿಂಗಳ ಅವಧಿಯಲ್ಲಿ ಸಂಪಾದನೆ ಮಾಡಿರುವ ಮೊತ್ತಗಳು ಇಷ್ಟಿವೆ:
ಆನ್ ಲೈನ್ ಮದುವೆಗೆ ಕೋರ್ಟ್ ಒಪ್ಪಿಗೆ: ಇಂಗ್ಲೆಂಡ್ ನಲ್ಲಿದ್ದುಕೊಂಡೇ ಕೇರಳದಲ್ಲಿನ ವಧು ಜೊತೆ ಸಪ್ತಪದಿ ತುಳಿಯಲಿರುವ ವರ…!
1. ರೈಲು ಸಂಖ್ಯೆ 22181 ಜಬಲ್ಪುರ – ನಿಜ಼ಾಮುದ್ದೀನ್ ಗೊಂಡವನ ಎಕ್ಸ್‌ಪ್ರೆಸ್ – 21.32 ಕೋಟಿ ರೂ.
2. ರೈಲು ಸಂಖ್ಯೆ 12437 ರೇವಾ – ಆನಂದ್ ವಿಹಾರ್ ಎಕ್ಸ್‌ಪ್ರೆಸ್ – 20.52 ಕೋಟಿ ರೂ.
3. ರೈಲು ಸಂಖ್ಯೆ 11447 ಜಬಲ್ಪುರ – ಹೌರಾ ಶಕ್ತಿಪುಂಜ್ ಎಕ್ಸ್‌ಪ್ರೆಸ್ – 19.93 ಕೋಟಿ ರೂ.
4. ರೈಲು ಸಂಖ್ಯೆ 12854 ಜಬಲ್ಪುರ – ದುರ್ಗ್ ಅಮರ್ಕಂಟಕ್ ಎಕ್ಸ್‌ಪ್ರೆಸ್ – 19.59 ಕೋಟಿ ರೂ.
5. ರೈಲು ಸಂಖ್ಯೆ 11464 ಜಬಲ್ಪುರ – ಸೋಮನಾಥ ಎಕ್ಸ್‌ಪ್ರೆಸ್ – 18.67 ಕೋಟಿ ರೂ.