alex Certify IOCL ನೇಮಕಾತಿ: 1.05 ಲಕ್ಷ ರೂ.ವರೆಗೆ ವೇತನದ ವಿವಿಧ ಹುದ್ದೆಗಳಿಗೆ ಅರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IOCL ನೇಮಕಾತಿ: 1.05 ಲಕ್ಷ ರೂ.ವರೆಗೆ ವೇತನದ ವಿವಿಧ ಹುದ್ದೆಗಳಿಗೆ ಅರ್ಜಿ

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(ಐಒಸಿಎಲ್) ಭಾರತದಾದ್ಯಂತ ಹಲವಾರು ಹುದ್ದೆಗಳನ್ನು ಘೋಷಿಸಿದ್ದು, ವಿವಿಧ ಹುದ್ದೆಗಳಿಗೆ ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ವೇತನ ಶ್ರೇಣಿ 25,000 ರೂ.ನಿಂದ 1,05,000 ರೂ. ವರೆಗೆ ಇರುತ್ತದೆ. ಗುವಾಹಟಿ, ದಿಗ್ಬಾಯ್, ಬೊಂಗೈಗಾಂವ್(ಅಸ್ಸಾಂ), ಬರೌನಿ(ಬಿಹಾರ), ವಡೋದರಾ(ಗುಜರಾತ್), ಹಲ್ಡಿಯಾ(ಪಶ್ಚಿಮ ಬಂಗಾಳ), ಮಥುರಾ (ಉತ್ತರ ಪ್ರದೇಶ), ಪಾಣಿಪತ್ (ಹರಿಯಾಣ) ಮತ್ತು ಪರದೀಪ್ (ಒಡಿಶಾ) ದಲ್ಲಿನ IOCL ನ ಸಂಸ್ಕರಣಾಗಾರಗಳು ಮತ್ತು ಪೆಟ್ರೋಕೆಮಿಕಲ್ ಘಟಕಗಳಿಗೆ ಖಾಲಿ ಹುದ್ದೆಗಳ ನೇಮಕಾತಿ ನಡೆಯಲಿದೆ.

ಹುದ್ದೆಗಳ ಸಂಖ್ಯೆ ಮತ್ತು ವಿವರ

ಕಿರಿಯ ಎಂಜಿನಿಯರಿಂಗ್ ಸಹಾಯಕ – IV (ಉತ್ಪಾದನೆ) – 296 ಹುದ್ದೆಗಳು

ಜೂನಿಯರ್ ಇಂಜಿನಿಯರಿಂಗ್ ಸಹಾಯಕ – IV (P&U) – 35 ಹುದ್ದೆಗಳು

ಕಿರಿಯ ಎಂಜಿನಿಯರಿಂಗ್ ಸಹಾಯಕ – IV (ಎಲೆಕ್ಟ್ರಿಕಲ್)/ ಕಿರಿಯ ತಾಂತ್ರಿಕ ಸಹಾಯಕ – IV (P & U -O & M) – 65 ಹುದ್ದೆಗಳು

ಕಿರಿಯ ಎಂಜಿನಿಯರಿಂಗ್ ಸಹಾಯಕ – IV (ಮೆಕ್ಯಾನಿಕಲ್)/ಕಿರಿಯ ತಾಂತ್ರಿಕ ಸಹಾಯಕ – IV – 32 ಹುದ್ದೆಗಳು

ಜೂನಿಯರ್ ಇಂಜಿನಿಯರಿಂಗ್ ಸಹಾಯಕ – IV (ಇನ್ಸ್ಟ್ರುಮೆಂಟೇಶನ್)/ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- IV – 37 ಹುದ್ದೆಗಳು

ಜೂನಿಯರ್ ಗುಣಮಟ್ಟ ನಿಯಂತ್ರಣ ವಿಶ್ಲೇಷಕ – IV – 29 ಹುದ್ದೆಗಳು

ಜೂನಿಯರ್ ಇಂಜಿನಿಯರಿಂಗ್ ಸಹಾಯಕ – IV (ಫೈರ್ & ಸೇಫ್ಟಿ) – 14 ಹುದ್ದೆಗಳು

ಕಿರಿಯ ವಸ್ತು ಸಹಾಯಕ – IV / ಕಿರಿಯ ತಾಂತ್ರಿಕ ಸಹಾಯಕ – IV – 04 ಹುದ್ದೆಗಳು

ಕಿರಿಯ ನರ್ಸಿಂಗ್ ಸಹಾಯಕ – IV – 01 ಹುದ್ದೆ

ವಯೋಮಿತಿ ವಿವರ

ಸೆಪ್ಟೆಂಬರ್ 30, 2021 ರ ವೇಳೆಗೆ ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 26 ವರ್ಷಗಳು. ಸರ್ಕಾರಿ ನಿಯಮಗಳ ಪ್ರಕಾರ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಮಾಹಿತಿ

www.iocl.com ನಲ್ಲಿ IOCL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಅರ್ಜಿಯ ಲಿಂಕ್ ಅಕ್ಟೋಬರ್ 12, 2021 (17 ಗಂಟೆ) ವರೆಗೆ ತೆರೆದಿರುತ್ತದೆ.

ಆನ್‌ಲೈನ್ ಮೋಡ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.. ಆನ್‌ಲೈನ್ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸಹ ಕಳುಹಿಸಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...