alex Certify ಮೋನಿಕಾ ಓ ಮೈ ಡಾರ್ಲಿಂಗ್ ಟ್ಯೂನ್ ನುಡಿಸಿದ ಭಾರತೀಯ ನೌಕಾಪಡೆಯ ಬ್ಯಾಂಡ್, ಸಶಸ್ತ್ರ ಪಡೆಯ ತಾಲೀಮಿಗೆ ಫಿದಾ ಆದ ನೆಟ್ಟಿಗರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋನಿಕಾ ಓ ಮೈ ಡಾರ್ಲಿಂಗ್ ಟ್ಯೂನ್ ನುಡಿಸಿದ ಭಾರತೀಯ ನೌಕಾಪಡೆಯ ಬ್ಯಾಂಡ್, ಸಶಸ್ತ್ರ ಪಡೆಯ ತಾಲೀಮಿಗೆ ಫಿದಾ ಆದ ನೆಟ್ಟಿಗರು….!

ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‌ಗೆ ಮುಂಚಿತವಾಗಿ, ದೆಹಲಿಯ ರಾಜ್‌ಪಥ್‌ನಲ್ಲಿ ರಿಹರ್ಸಲ್‌ಗಳು ಭರದಿಂದ ಸಾಗುತ್ತಿವೆ. ಭಾರತೀಯ ನೌಕಾಪಡೆಯು ಗಣತಂತ್ರ ಆಚರಣೆಗಾಗಿ ತಾಲೀಮು ನಡೆಸುತ್ತಿರುವ ವೀಡಿಯೊವನ್ನು ಭಾರತ ಸರ್ಕಾರ ಶನಿವಾರ ಟ್ವೀಟ್ ಮಾಡಿದೆ. ವಿಭಿನ್ನ ಟ್ಯೂನ್ ಇರುವ ಈ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ.

2.25 ನಿಮಿಷಗಳಷ್ಟಿರುವ ವಿಡಿಯೋದಲ್ಲಿ, ಭಾರತೀಯ ನೌಕಾಪಡೆಯ ಬ್ಯಾಂಡ್ ಸಮವಸ್ತ್ರ ಧರಿಸಿ, ಪ್ರಸಿದ್ಧ ಬಾಲಿವುಡ್ ಹಾಡೊಂದರ ಲಯಕ್ಕೆ ಚಲಿಸುವುದನ್ನು ನೋಡಬಹುದು. ರಕ್ಷಣಾ ಸಿಬ್ಬಂದಿ ತಮ್ಮ ರೈಫಲ್‌ಗಳ ವಿರುದ್ಧ ಚಪ್ಪಾಳೆ ತಟ್ಟುತ್ತಾ ಮೋನಿಕಾ ಓ ಮೈ ಡಾರ್ಲಿಂಗ್ ಹಾಡಿನ ಟ್ಯೂನ್ ಗೆ ಗ್ರೂವ್ ಮಾಡುತ್ತಿದ್ದಾರೆ.

ಇತ್ತ ನೌಕಾಪಡೆಯ ಬ್ಯಾಂಡ್ ಈ ಹಾಡನ್ನು ವಿಜೃಂಭಣೆಯಿಂದ ನುಡಿಸುತ್ತಿದೆ. 1967 ರಲ್ಲಿ ಬಿಡುಗಡೆಯಾದ ಚಲನಚಿತ್ರ ಕಾರವಾನ್‌ನ ಚಿತ್ರದ ಮೋನಿಕಾ ಓ ಮೈ ಡಾರ್ಲಿಂಗ್ ಈಗಲೂ ತನ್ನದೇ ಜನಪ್ರಿಯತೆ ಹೊಂದಿರುವ ಹಾಡು.‌ ನೌಕಾಪಡೆಯ ಟ್ಯೂನ್ ಸೆಲೆಕ್ಷನ್ ಗೆ ನೆಟ್ಟಿಗುರು ಫಿದಾ ಆಗಿದ್ದು, ಪೋಸ್ಟ್ ಗೆ 3.46 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ದೊರೆತಿವೆ.‌ ಈ ಪೋಸ್ಟ್ ಗೆ ನೀಡಿರುವ ಶೀರ್ಷಿಕೆ‌ ಕೂಡ ವಿಭಿನ್ನವಾಗಿದ್ದು, ಟ್ವಿಟ್ಟರ್ ಬಳಕೆದಾರರು ಅಮೋಘ, ಅದ್ಭುತ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...