alex Certify ʼಇಂಡಿಯನ್​ ಐಡಲ್ʼ​ ಸೀಸನ್​ 12 ರ ವಿಜೇತರಾಗಿ ಹೊರಹೊಮ್ಮಿದ ಪವನ್​ ದೀಪ್ ರಾಜನ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಇಂಡಿಯನ್​ ಐಡಲ್ʼ​ ಸೀಸನ್​ 12 ರ ವಿಜೇತರಾಗಿ ಹೊರಹೊಮ್ಮಿದ ಪವನ್​ ದೀಪ್ ರಾಜನ್​….!

ಪ್ರತಿಷ್ಟಿತ ರಿಯಾಲಿಟಿ ಶೋ ಇಂಡಿಯನ್​ ಐಡಲ್​ ಸೀಸನ್​ 12 ರ ವಿಜೇತರಾಗಿ ಪವನ್​ದೀಪ್​ ರಾಜನ್​ ಹೊರಹೊಮ್ಮಿದ್ದಾರೆ. ತಡರಾತ್ರಿ 12 ಗಂಟೆಗೆ ಸರಿಯಾಗಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ಪವನ್​ ದೀಪ್​ ರಾಜನ್​​​ ಟ್ರೋಫಿ, 25 ಲಕ್ಷ ರೂಪಾಯಿ ನಗದು ಹಾಗೂ ಸ್ವಾಂಕಿ ಬ್ರ್ಯಾಂಡ್​ ನ್ಯೂ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಅರುಣಿತಾ ಕಾಂಜಿಲಾಲ್​ ಮೊದಲ ರನ್ನರ್​ ಅಪ್​ ಹಾಗೂ ಸಯಾಲಿ ಕಾಂಬ್ಳೆ 2ನೇ ರನ್ನರ್​ ಅಪ್​ ಆಗಿ ಹೊರಹೊಮ್ಮಿದ್ದಾರೆ. ಮೋಹ್ದ್​ ಡ್ಯಾನಿಶ್​, ನಿಹಾಲ್​ ತೌರೋ ಹಾಗೂ ಶಣ್ಮುಖಪ್ರಿಯ ಕೂಡ ಫಿನಾಲೆ ಎಪಿಸೋಡ್​ನಲ್ಲಿ ಭಾಗಿಯಾಗಿದ್ದರು. ಇಂಡಿಯನ್​ ಐಡಲ್​ 12 ಅತ್ಯಂತ ದೀರ್ಘ ರಿಯಾಲಿಟಿ ಶೋ ಆಗಿದೆ. ಹಾಗೂ ಫಿನಾಲೆ ಎಪಿಸೋಡ್​ ಕೂಡ ಅತಿ ಹೆಚ್ಚು ಕಂತುಗಳನ್ನು ಹೊಂದಿದೆ. ಈ ಗಾಯನ ಸಂಬಂಧಿ ರಿಯಾಲಿಟಿ ಶೋ 8 ತಿಂಗಳುಗಳ ಕಾಲ ನಡೆದಿತ್ತು ಹಾಗೂ ಫಿನಾಲೆ ಎಪಿಸೋಡ್​ನ್ನು 12 ಗಂಟೆಗಳ ಕಾಲ ಪ್ರಸಾರ ಮಾಡಲಾಗಿದೆ.

ಉತ್ತರಾಖಂಡ್​ ಮೂಲದ ಪವನ್​ದೀಪ್​​ ಮೊದಲ ಎಪಿಸೋಡ್​ನಿಂದಲೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಹಾಗೂ ಕೋ ಸ್ಟಾರ್​ಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.

ಫಿನಾಲೆ ಎಪಿಸೋಡ್​ನಲ್ಲಿ ಬಾಲಿವುಡ್​ ತಾರೆಯರಾದ ಕಿಯಾರಾ ಅಡ್ವಾಣಿ, ಸಿದ್ದಾರ್ಥ್​ ಮಲ್ಹೋತ್ರಾ, ದಿ ಗ್ರೇಟ್​ ಖಾಲಿ, ಅಲ್ಕಾ ಯಗ್ನಿಕ್​, ಮಿಕಾ ಸಿಂಗ್​, ಉದಿತ್​ ನಾರಾಯಣ್​ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಈ ಕಾರ್ಯಕ್ರಮವನ್ನು ಗಾಯಕ ಹಾಗೂ ನಿರೂಪಕ ಆದಿತ್ಯ ನಾರಾಯಣ್​ ನಡೆಸಿಕೊಟ್ಟಿದ್ದರು. ಫಿನಾಲೆ ಎಪಿಸೋಡ್​ನಲ್ಲಿ ಭಾರತಿ ಸಿಂಗ್​ ಹಾಗೂ ಹರ್ಷ್ ಲಿಂಬಾಚಿಯಾ ಕೂಡ ನಿರೂಪಣೆ ಜವಾಬ್ದಾರಿ ವಹಿಸಿಕೊಂಡಿದ್ರು.

ಇನ್ನು ವಿಜೇತರ ಘೋಷಣೆಯಾದ ಬಳಿಕ ಮಾತನಾಡಿದ ಪವನ್​ದೀಪ್, ಇಂಡಿಯನ್​ ಐಡಲ್​ ವೇದಿಕೆಯಲ್ಲಿ ಗಾಯಕರಿಗೆ ಉತ್ತಮ ಗೌರವ ದೊರಕಿದೆ. ಈ ವೇದಿಕೆಯ ಮೂಲಕ ನಾವು ಅನೇಕ ಹಾಡುಗಳಿಗೆ ದನಿಯಾಗಿದ್ದೇವೆ. ಉತ್ತಮ ನಿರ್ಣಾಯಕರು ಹಾಗೂ ಉತ್ತಮ ಅತಿಥಿಗಳ ಎದುರು ಹಾಡುವ ಭಾಗ್ಯ ನಮಗೆ ದೊರಕಿತ್ತು ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...