alex Certify ದುಬೈನಲ್ಲಿ ನೆಲೆಸಿದ್ದ ಭಾರತೀಯನಿಗೆ ಬಂಪರ್;‌ ಲಾಟರಿಯಲ್ಲಿ ಬರೋಬ್ಬರಿ 55 ಕೋಟಿ ರೂ. ಬಹುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬೈನಲ್ಲಿ ನೆಲೆಸಿದ್ದ ಭಾರತೀಯನಿಗೆ ಬಂಪರ್;‌ ಲಾಟರಿಯಲ್ಲಿ ಬರೋಬ್ಬರಿ 55 ಕೋಟಿ ರೂ. ಬಹುಮಾನ

ದುಬೈನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ 25 ಮಿಲಿಯನ್ ದಿರ್ಹಮ್‌ (ಅಂದರೆ ಸುಮಾರು 55 ಕೋಟಿ ರೂಪಾಯಿ) ಜಾಕ್​ಪಾಟ್​ ಹೊಡೆದಿದೆ. ಅಬುಧಾಬಿ ಬಿಗ್ ಟಿಕೆಟ್ ಡ್ರಾದಲ್ಲಿ ಈ ಬಹುಮಾನ ಸಿಕ್ಕಿದೆ.

47 ವರ್ಷದ ಸಜೇಶ್ ಎನ್ಎಸ್ ಅವರು ದುಬೈನ ಕರಾಮ ಎಂಬ ಪ್ರದೇಶದ ಇಕ್ಕಯೀಸ್ ​​ರೆಸ್ಟೋರೆಂಟ್‌ನಲ್ಲಿ ಖರೀದಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳು ಅವರು ಟಿಕೆಟ್‌ಗಳನ್ನು ಖರೀದಿ ಮಾಡುತ್ತಿದ್ದರೂ ಅಷ್ಟೊಂದು ಹಣ ಸಿಕ್ಕಿರಲಿಲ್ಲ. ಈ ಲಾಟರಿ ಖರೀದಿಸಲು ಸಜೇಶ್ ಅವರಿಗೆ 20 ಸಹೋದ್ಯೋಗಿಗಳು ಸಹಾಯ ಮಾಡಿದ್ದು, ಎಲ್ಲರಿಗೂ ಹಣದ ಮೊತ್ತವನ್ನು ಸಮನಾಗಿ ಹಂಚುವುದಾಗಿ ಸಜೇಶ್​ ಹೇಳಿದ್ದಾರೆ.

ನಾನು ಕೆಲಸ ಮಾಡುವ ಹೋಟೆಲ್‌ನಲ್ಲಿ 150 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ ಮತ್ತು ನನ್ನ ಗೆಲುವಿನ ಒಂದು ಭಾಗವನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ ಅವರಲ್ಲಿ ಅನೇಕರಿಗೆ ಸಹಾಯ ಮಾಡಲು ನಾನು ಬಯಸುತ್ತೇನೆ” ಎಂದೂ ಅವರು ಹೇಳಿದ್ದಾರೆ.

55 ಕೋಟಿ ರೂ. ಹಣ ಗೆದ್ದ ಬಳಿಕ ಭಾರತದಲ್ಲಿರುವ ತನ್ನ ಹೆಂಡತಿಗೆ ತಕ್ಷಣವೇ ಸಜೇಶ್ ಕರೆ ಮಾಡಿದರು. ಈ ವಿಚಾರವನ್ನು ತಿಳಿಸಿದರೆ ಹೆಂಡತಿ ನಂಬಲಿಲ್ಲ. ಅವಳು ತಮಾಷೆ ಎಂದು ಭಾವಿಸಿದಳು, ಮತ್ತು ಅಂತಿಮವಾಗಿ ವಾಸ್ತವಕ್ಕೆ ಬರಲು ಅವಳು ಸ್ವಲ್ಪ ಸಮಯ ತೆಗೆದುಕೊಂಡಳು ಎಂದು ಸಜೇಶ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...