
ಶುಕ್ರವಾರ ನಡೆದ ರೋಚಕ ಸೆಮಿಫೈನಲ್ ಕದನದಲ್ಲಿ ಜೋಕೋವಿಚ್ 3-6, 6-3, 7-6,(7/4) ,6-2 ಅಂತರದಲ್ಲಿ ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ಮೂರನೇ ಶ್ರೇಯಾಂಕಿತ ನಡಾಲ್ ವಿರುದ್ಧ ಜಯ ಸಾಧಿಸಿದ್ರು. ಈ ಮೂಲಕ ಫ್ರೆಂಚ್ ಓಪನ್ ಪಂದ್ಯದ ಇತಿಹಾಸದಲ್ಲೇ ಅಂತಿಮ ನಾಲ್ಕರ ಹಂತದಲ್ಲಿ ನಡಾಲ್ಗೆ ಸೋಲುಣಿಸಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
ಈ ರೋಚಕ ಪಂದ್ಯವನ್ನ ಕೇವಲ ಟೆನ್ನಿಸ್ ಅಭಿಮಾನಿಗಳು ಮಾತ್ರವಲ್ಲದೇ ಟೀಂ ಇಂಡಿಯಾದ ಖ್ಯಾತ ಆಟಗಾರರೂ ಸಹ ವೀಕ್ಷಿಸಿದ್ದು ಪಂದ್ಯದ ಬಗ್ಗೆ ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯಗಳನ್ನ ಶೇರ್ ಮಾಡಿದ್ದಾರೆ. ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್, ದಿನೇಶ್ ಕಾರ್ತಿಕ್, ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಸೇರಿದಂತೆ ಅನೇಕರು ಟ್ವಿಟರ್ನಲ್ಲಿ ಇಬ್ಬರು ಟೆನ್ನಿಸ್ ದಿಗ್ಗಜರ ಈ ರೋಚಕ ಕದನವನ್ನ ತಾವೆಷ್ಟು ಎಂಜಾಯ್ ಮಾಡಿದ್ದೇವೆ ಎನ್ನೋದನ್ನ ವರ್ಣಿಸಿದ್ದಾರೆ.