alex Certify BIG BREAKING: ಆಸ್ಟ್ರೇಲಿಯನ್ ಓಪನ್ ಕಿರೀಟ ಗೆದ್ದು ಇತಿಹಾಸ ಸೃಷ್ಠಿಸಿದ ರಾಫೆಲ್ ನಡಾಲ್, 21 ನೇ ಗ್ರ್ಯಾಂಡ್ ಸ್ಲ್ಯಾಮ್ ಗೆ ಮುತ್ತಿಕ್ಕಿ ಹೊಸ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಆಸ್ಟ್ರೇಲಿಯನ್ ಓಪನ್ ಕಿರೀಟ ಗೆದ್ದು ಇತಿಹಾಸ ಸೃಷ್ಠಿಸಿದ ರಾಫೆಲ್ ನಡಾಲ್, 21 ನೇ ಗ್ರ್ಯಾಂಡ್ ಸ್ಲ್ಯಾಮ್ ಗೆ ಮುತ್ತಿಕ್ಕಿ ಹೊಸ ದಾಖಲೆ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ -2022 ರ ಪುರುಷರ ಸಿಂಗಲ್ಸ್ ನಲ್ಲಿ ರಾಫೆಲ್ ನಡಾಲ್ ಚಾಂಪಿಯನ್ ಭರ್ಜರಿ ಜಯ ಗಳಿಸಿದ್ದಾರೆ.

ರಾಫೆಲ್ ನಡಾಲ್ 21 ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದ ಮೊದಲ ಪುರುಷರ ಆಟಗಾರ ಎನಿಸಿಕೊಂಡರು, ಫೈನಲ್‌ನಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು 2-6, 6-7, 6-4, 6-4, 7-5 ಸೆಟ್‌ಗಳಿಂದ ಸೋಲಿಸಿ ತಮ್ಮ ಎರಡನೇ ಪ್ರಶಸ್ತಿಯನ್ನು ಗೆದ್ದರು.

ಎರಡನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಕಿರೀಟ ಗೆದ್ದಿದ್ದಾರೆ. 2009 ರ ಬಳಿಕ ಆಸ್ಟ್ರೇಲಿಯಾ ಓಪನ್ ಗೆದ್ದ ರಾಫೆಲ್ ನಡಾಲ್ ಅವರು ರಷ್ಯಾದ ಡೇನಿಯಲ್ ಮೆಡ್ವೆಡೇವ್ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಪುರುಷರ ರ ಟೆನಿಸ್ ನಲ್ಲಿ ರಾಫೆಲ್ ನಡಾಲ್ ಇತಿಹಾಸ ಸೃಷ್ಟಿಸಿದ್ದಾರೆ. 21 ನೇ ಗ್ರ್ಯಾಂಡ್ ಸ್ಲ್ಯಾಮ್‌ ಗೆ ಮುತ್ತಿಕ್ಕಿದ್ದಾರೆ. ರೋಜರ್ ಫೆಡರರ್, ಜೊಕೊವಿಕ್ ಅವರನ್ನು ನಡಾಲ್ ಹಿಂದಿಕ್ಕಿದ್ದಾರೆ. ಅವರಿಬ್ಬರೂ ತಲಾ 20 ಗ್ರ್ಯಾಂಡ್ ಸ್ಲ್ಯಾಮ್‌ ಜಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...