alex Certify ಜೊಕೊವಿಚ್​ – ನಡಾಲ್​ ನಡುವಿನ ರೋಚಕ ಹಣಾಹಣಿ ಕಂಡು ಮೂಕವಿಸ್ಮಿತರಾದ ಭಾರತೀಯ ಕ್ರಿಕೆಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೊಕೊವಿಚ್​ – ನಡಾಲ್​ ನಡುವಿನ ರೋಚಕ ಹಣಾಹಣಿ ಕಂಡು ಮೂಕವಿಸ್ಮಿತರಾದ ಭಾರತೀಯ ಕ್ರಿಕೆಟಿಗರು

ವಿಶ್ವದ ನಂಬರ್​1 ಟೆನ್ನಿಸ್​ ಆಟಗಾರ ನೊವಾಕ್​ ಜೋಕೋವಿಚ್​​ ಪ್ರತಿಷ್ಠಿತ ಫ್ರೆಂಚ್​ ಓಪನ್​​ ಸೆಮಿಫೈನಲ್​ ಪಂದ್ಯದಲ್ಲಿ 13 ಬಾರಿ ಫ್ರೆಂಚ್​ ಓಪನ್​​ ಗ್ರ್ಯಾನ್​ ಸ್ಲಾಮ್​ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿರುವ ಸ್ಪೇನ್​​ನ ರಫೆಲ್​ ನಡಾಲ್​ರನ್ನ ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜೋಕೋವಿಚ್​ ಪ್ರತಿಷ್ಠಿತ ಟೂರ್ನಿಯ ಫೈನಲ್​ಗೆ ಕಾಲಿಟ್ಟಿದ್ದಾರೆ.

ಶುಕ್ರವಾರ ನಡೆದ ರೋಚಕ ಸೆಮಿಫೈನಲ್​ ಕದನದಲ್ಲಿ ಜೋಕೋವಿಚ್​​ 3-6, 6-3, 7-6,(7/4) ,6-2 ಅಂತರದಲ್ಲಿ ಕಿಂಗ್​ ಆಫ್​ ಕ್ಲೇ ಕೋರ್ಟ್​ ಖ್ಯಾತಿಯ ಮೂರನೇ ಶ್ರೇಯಾಂಕಿತ ನಡಾಲ್​ ವಿರುದ್ಧ ಜಯ ಸಾಧಿಸಿದ್ರು. ಈ ಮೂಲಕ ಫ್ರೆಂಚ್​ ಓಪನ್​​ ಪಂದ್ಯದ ಇತಿಹಾಸದಲ್ಲೇ ಅಂತಿಮ ನಾಲ್ಕರ ಹಂತದಲ್ಲಿ ನಡಾಲ್​ಗೆ ಸೋಲುಣಿಸಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

ಈ ರೋಚಕ ಪಂದ್ಯವನ್ನ ಕೇವಲ ಟೆನ್ನಿಸ್​ ಅಭಿಮಾನಿಗಳು ಮಾತ್ರವಲ್ಲದೇ ಟೀಂ ಇಂಡಿಯಾದ ಖ್ಯಾತ ಆಟಗಾರರೂ ಸಹ ವೀಕ್ಷಿಸಿದ್ದು ಪಂದ್ಯದ ಬಗ್ಗೆ ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯಗಳನ್ನ ಶೇರ್​ ಮಾಡಿದ್ದಾರೆ. ಆರ್. ಅಶ್ವಿನ್​, ವಾಷಿಂಗ್ಟನ್​ ಸುಂದರ್, ದಿನೇಶ್​ ಕಾರ್ತಿಕ್​, ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್​ ಸೇರಿದಂತೆ ಅನೇಕರು ಟ್ವಿಟರ್​ನಲ್ಲಿ ಇಬ್ಬರು ಟೆನ್ನಿಸ್​ ದಿಗ್ಗಜರ ಈ ರೋಚಕ ಕದನವನ್ನ ತಾವೆಷ್ಟು ಎಂಜಾಯ್​ ಮಾಡಿದ್ದೇವೆ ಎನ್ನೋದನ್ನ ವರ್ಣಿಸಿದ್ದಾರೆ.

— Mask up and take your vaccine???? (@ashwinravi99) June 11, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...