alex Certify ಟೀಂ ಇಂಡಿಯಾದ ಈ ಆಟಗಾರರ ನೆತ್ತಿ ಮೇಲೆ ತೂಗುತ್ತಿದೆ ತೂಗುಗತ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾದ ಈ ಆಟಗಾರರ ನೆತ್ತಿ ಮೇಲೆ ತೂಗುತ್ತಿದೆ ತೂಗುಗತ್ತಿ

ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಮಧ್ಯೆ ನಾಲ್ಕನೇ ಟೆಸ್ಟ್ ಪಂದ್ಯ ಇಂದಿನಿಂದ ಶುರುವಾಗಲಿದೆ. ಕೆಲ ಆಟಗಾರರ ಭವಿಷ್ಯ ಈ ಟೆಸ್ಟ್ ಸರಣಿ ನಿರ್ಧರಿಸಲಿದೆ. ಕಳಪೆ ಪ್ರದರ್ಶನದಿಂದಾಗಿ3 ಆಟಗಾರರ ವೃತ್ತಿಜೀವನ ಕೊನೆಗೊಳ್ಳುವ ಸಾಧ್ಯತೆಯಿದೆ.

ಅಜಿಂಕ್ಯ ರಹಾನೆ ಭವಿಷ್ಯ ಸಂಕಷ್ಟದಲ್ಲಿದೆ. ಕಳಪೆ ಪ್ರದರ್ಶನ ನೀಡ್ತಿರುವ ರಹಾನೆ ಬ್ಯಾಟಿಂಗ್ ನಲ್ಲಿ ಬಲವಿಲ್ಲ. ಟೆಸ್ಟ್ ಪಂದ್ಯದಲ್ಲಿ ರಹಾನೆ ಭರವಸೆಯ ಆಟವಾಡ್ತಿಲ್ಲ. 5 ನೇ ಸ್ಥಾನದಲ್ಲಿ ಆಡ್ತಿರುವ ಅಜಿಂಕ್ಯ ರಹಾನೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಶತಕ ಸಿಡಿಸಿದ್ದರು. ಅಜಿಂಕ್ಯ ರಹಾನೆ, ಕೊನೆಯ ಎರಡು ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ, ಸೂರ್ಯಕುಮಾರ್ ಯಾದವ್ ಟೆಸ್ಟ್ ತಂಡಕ್ಕೆ ಪ್ರವೇಶ ಪಡೆಯಲಿದ್ದಾರೆ.

ಮೊಹಮ್ಮದ್ ಸಿರಾಜ್ ಆಗಮನದ ನಂತರ, ಇಶಾಂತ್ ಶರ್ಮಾ ಭವಿಷ್ಯ ಅಲುಗಾಡ್ತಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ, ಇಶಾಂತ್ ಶರ್ಮಾ ಟೀಮ್ ಇಂಡಿಯಾಕ್ಕೆ ಮುಳುವಾಗಿದ್ದರು. ಇಶಾಂತ್ ಶರ್ಮಾ ಮೂರನೇ ಟೆಸ್ಟ್ ಪಂದ್ಯದಲ್ಲಿ ರನ್ ನೀಡಿದ್ದಲ್ಲದೆ, ಒಂದು ವಿಕೆಟ್ ಕೂಡ ನೀಡಲಿಲ್ಲ. ಇಶಾಂತ್ ಶರ್ಮಾ 22 ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯದೆ 92 ರನ್ ನೀಡಿದರು. ಇಂಗ್ಲೆಂಡ್ ಟೆಸ್ಟ್, ಇಶಾಂತ್ ಶರ್ಮಾಗೆ ಕೊನೆ ಟೆಸ್ಟ್ ಆಗುವ ಸಾಧ್ಯತೆಯಿದೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯುತ್ತಮ ವೇಗದ ಬೌಲರ್‌ ಸೇರ್ಪಡೆಯಾಗಿದ್ದಾರೆ.ಯುವ ಆಟಗಾರರು, ಉಮೇಶ್ ಯಾದವ್ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದ್ದಾರೆ. ಭಾರತ ಟೆಸ್ಟ್ ತಂಡದ ಭಾಗವಾಗಿರುವ ಉಮೇಶ್ ಯಾದವ್, ಇಂಗ್ಲೆಂಡ್ ಪ್ರವಾಸದ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿರಬಹುದು, ಆದರೆ 48 ಟೆಸ್ಟ್ ಪಂದ್ಯ ಆಡಿರುವ 33 ವರ್ಷದ ಉಮೇಶ್ ಯಾದವ್ಗೆ ಇಂಗ್ಲೆಂಡ್ ಪ್ರವಾಸ ಕೊನೆಯ ಪಂದ್ಯವಾಗುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...