alex Certify ನಮ್ಮ ಒಬ್ಬ ಆಟಗಾರನ ಕೆಣಕಿದರೆ ಮಿಕ್ಕ 10 ಮಂದಿ ಸೇರಿ ಪ್ರತ್ಯುತ್ತರ ಕೊಡುತ್ತೇವೆ: ಕೆ.ಎಲ್. ರಾಹುಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮ ಒಬ್ಬ ಆಟಗಾರನ ಕೆಣಕಿದರೆ ಮಿಕ್ಕ 10 ಮಂದಿ ಸೇರಿ ಪ್ರತ್ಯುತ್ತರ ಕೊಡುತ್ತೇವೆ: ಕೆ.ಎಲ್. ರಾಹುಲ್

ಸೌರವ್‌ ಗಂಗೂಲಿ ನಾಯಕತ್ವದಲ್ಲಿ ಬೆಳೆಸಿಕೊಂಡ ಆಕ್ರಮಣಶೀಲ ಮನೋಭಾವವನ್ನು ಟೀಂ ಇಂಡಿಯಾ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಬೇರೆಯದೇ ಮಟ್ಟಕ್ಕೆ ಕೊಂಡೊಯ್ದಿದೆ.

“ನಮ್ಮ ಎದುರಾಳಿ ತಂಡದ ಆಟಗಾರನೇನಾದರೂ ನಮ್ಮ ಒಬ್ಬನೇ ಆಟಗಾರನನ್ನು ಸ್ಲೆಡ್ಜ್ ಮಾಡಿದರೆ, ಮಿಕ್ಕ 10 ಮಂದಿ ಸೇರಿಕೊಂಡು ಎದುರಾಳಿಗಳ ಮೇಲೆ ಇನ್ನಷ್ಟು ತೀವ್ರವಾಗಿ ಪ್ರತಿರೋಧ ಒಡ್ಡುತ್ತೇವೆ. ನಮ್ಮ ತಂಡದಲ್ಲಿ ಈ ರೀತಿಯ ವಾತಾವರಣ ಹಾಗೂ ಐಕ್ಯತೆ ಇದೆ. ನೀವು ನಮ್ಮ ಒಬ್ಬನೇ ಒಬ್ಬ ಆಟಗಾರನನ್ನು ಎದುರು ಹಾಕಿಕೊಂಡರೆ ಇಡೀ ತಂಡವನ್ನೇ ಎದುರು ಹಾಕಿಕೊಂಡಂತೆ,” ಎಂದಿದ್ದಾರೆ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್.

ಲಾರ್ಡ್ಸ್ ಟೆಸ್ಟ್‌ನ ಮೂರನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಭಾರತ ತಂಡದ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳಾದ ಜಸ್ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮೇಲೆ ಶಾರ್ಟ್ ಪಿಚ್‌ ಬೌಲಿಂಗ್‌ ಪ್ರಹಾರ ಮಾಡಿದ ಇಂಗ್ಲೆಂಡ್‌ ವೇಗಿ ಮಾರ್ಕ್ ವುಡ್, ನಾಯಕ ಜೋ ರೂಟ್ ಮತ್ತು ಜಿಮ್ಮಿ ಆಂಡರ್ಸನ್ ಜೊತೆ ಸೇರಿಕೊಂಡು ಮಾತಿನ ದಾಳಿಗಿಳಿದಿದ್ದಾರೆ.

83 ರ ವೃದ್ದೆ ಬದುಕುಳಿಯಲು ಕಾರಣವಾಯ್ತು ಬೆಕ್ಕಿನ ಸಮಯಪ್ರಜ್ಞೆ

9ನೇ ವಿಕೆಟ್‌ಗೆ 89 ರನ್‌ ಕಲೆಹಾಕಿ ಸತಾಯಿಸುತ್ತಿದ್ದ ಬುಮ್ರಾ ಹಾಗೂ ಶಮಿ ವಿರುದ್ಧ ಹತಾಶರಾದ ಇಂಗ್ಲೆಂಡ್‌ನ ಮತ್ತೊಬ್ಬ ವೇಗಿ ಓಲ್ಲಿ ರಾಬಿನ್ಸನ್ ಸಹ ಮಾತಿನ ಬಿಸಿ ಏರಿಸಿದ್ದಾರೆ.

“ಕೊನೆಯ ದಿನದ ಕೊನೆಯ 60 ಓವರ್‌ಗಳಲ್ಲಿ ಇಂಗ್ಲಂಡ್ ಬ್ಯಾಟ್ಸ್‌ಮನ್‌ಗಳ ವಿರುದ್ಧ ತಮ್ಮಲ್ಲಿದ್ದ ಶ್ರೇಷ್ಠ ಆಟವನ್ನು ಹೊರತರಲು ಬೌಲರ್‌ಗಳು ಉತ್ಸುಕರಾಗಿದ್ದರು. ಜನರು ಕ್ರೀಡಾಂಗಣಕ್ಕೆ ಬರುವುದೇ ಇಂಥ ಆಟ ನೋಡಲು. ಪಂದ್ಯವನ್ನು ಗೆಲ್ಲಲು ಎರಡೂ ತಂಡಗಳು ಕಾತರಿಸುತ್ತಿದ್ದವು. ಬುಮ್ರಾ ಮತ್ತು ಶಮಿ ನಡುವಿನ ಜೊತೆಯಾಟದಲ್ಲಿ ಆ ರೀತಿಯ ಹೋರಾಟ ಕಂಡು ಬಂದ ಬಳಿಕ ಎದುರಾಳಿಗಳ ವಿರುದ್ಧ ದಾಳಿ ಮಾಡಲು ಬೌಲರ್‌ಗಳು ಸಜ್ಜಾಗಿದ್ದರು. ಭೋಜನ ವಿರಾಮದ ಬಳಿಕ ಇನಿಂಗ್ಸ್‌ ಡಿಕ್ಲೇರ್‌ ಮಾಡಲಿದ್ದೇವೆ ಎಂಬುದು ನಮಗೆ ಸ್ಪಷ್ಟವಿತ್ತು,” ಎಂದು ರಾಹುಲ್ ತಿಳಿಸಿದ್ದಾರೆ.

ಎರಡನೇ ಟೆಸ್ಟ್‌ ಪಂದ್ಯದಲ್ಲಿ 151ರನ್‌ ಅಂತರದಿಂದ ಗೆಲುವು ಸಾಧಿಸಿದ ಭಾರತ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ತಾಳ್ಮೆಯುತ 129 ರನ್‌ ಗಳಿಸಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ರಾಹುಲ್ ಪಂದ್ಯ ಶ್ರೇಷ್ಠರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...