alex Certify ಶ್ರೀಲಂಕಾಗೆ ನೆರವು ಮುಂದುವರಿಸಿದ ಭಾರತ; ಅಲ್ಲಿನ ಪೊಲೀಸರಿಗೆ 125 SUV ಹಸ್ತಾಂತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಲಂಕಾಗೆ ನೆರವು ಮುಂದುವರಿಸಿದ ಭಾರತ; ಅಲ್ಲಿನ ಪೊಲೀಸರಿಗೆ 125 SUV ಹಸ್ತಾಂತರ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೆರೆ ರಾಷ್ಟ್ರ ಶ್ರೀಲಂಕಾಗೆ ಭಾರತ ತನ್ನ ನೆರವನ್ನು ಮುಂದುವರಿಸಿದೆ. ಅಲ್ಲಿನ ಪೊಲೀಸರ ಬಳಕೆಗಾಗಿ 125 SUV ಗಳನ್ನು ಹಸ್ತಾಂತರಿಸಲಾಗಿದೆ.

‘ಲೈನ್ ಆಫ್ ಕ್ರೆಡಿಟ್’ ಅಡಿಯಲ್ಲಿ ಒಟ್ಟು 500 ಅತ್ಯಾಧುನಿಕ SUV ಗಳನ್ನು ನೀಡುವ ಸಲುವಾಗಿ ಈ ವರ್ಷದ ಆರಂಭದಲ್ಲಿ ಸಹಿ ಹಾಕಲಾಗಿದ್ದು, ಈಗ 125 ವಾಹನಗಳನ್ನು ಕಳುಹಿಸಲಾಗಿದೆ.

ತನ್ನ ನೆರೆ ರಾಷ್ಟ್ರಗಳಿಗೆ ನೆರವು ನೀಡುವ ಆದ್ಯತೆ ನೀತಿ ಅನ್ವಯ ಭಾರತ ಈ ತೀರ್ಮಾನ ಕೈಗೊಂಡಿದ್ದು, ಉಳಿದ ವಾಹನಗಳನ್ನು ಶೀಘ್ರದಲ್ಲೇ ಕಳಿಸಲಾಗುತ್ತದೆ ಎಂದು ಶ್ರೀಲಂಕಾದ ಭಾರತೀಯ ಹೈ ಕಮಿಷನರ್ ಗೋಪಾಲ್ ಬಾಗ್ಲೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...