alex Certify ಭಾರತ- ಪಾಕ್​ ನಡುವಿನ ಹೈ ವೋಲ್ಟೆಜ್‌ ಪಂದ್ಯಕ್ಕೂ ಮುನ್ನವೇ ಅಖಾಡಕ್ಕಿಳಿದ ಅಭಿಮಾನಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ- ಪಾಕ್​ ನಡುವಿನ ಹೈ ವೋಲ್ಟೆಜ್‌ ಪಂದ್ಯಕ್ಕೂ ಮುನ್ನವೇ ಅಖಾಡಕ್ಕಿಳಿದ ಅಭಿಮಾನಿಗಳು…!

ಏಷ್ಯಾ ಕಪ್​ ಇನ್ನೂ ಪ್ರಾರಂಭವಾಗಿಲ್ಲ, ಆದರೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ಅಭಿಮಾನಿಗಳು ಹೈವೋಲ್ಟೆಜ್ ಮ್ಯಾಚ್​ ನೋಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಭಾರತವು ವಿಶ್ವ ಕಪ್​‌ ನಲ್ಲಿ ಮೊದಲ ಬಾರಿಗೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೋತಾಗ ಅನೇಕ ಅಪಹಾಸ್ಯಗಳು ಕೇಳಿಬಂದಿದ್ದವು.

ಅಕ್ಟೋಬರ್​ 24, 2021ರಲ್ಲಿ ಪಾಕಿಸ್ತಾನವು 10 ವಿಕೆಟ್​ಗಳಿಂದ ಪಂದ್ಯ ಗೆದ್ದಿತು. ಆದರೆ ಎರಡು ರಾಷ್ಟ್ರಗಳ ನಡುವಿನ ಜಾಲತಾಣದಲ್ಲಿನ ತಮಾಷೆ ಇಂದಿಗೂ ನಿಂತಿಲ್ಲ.

ಇದೀಗ ಬಹು ನಿರೀಕ್ಷಿತ ಏಷ್ಯಾ ಕಪ್​ 2022 ಶನಿವಾರದಿಂದ (ಆಗಸ್ಟ್​ 27) ಆರಂಭಗೊಳ್ಳಲಿದ್ದು, ಮರುದಿನ ಭಾರತ- ಪಾಕಿಸ್ತಾನ ತಂಡ ಪರಸ್ಪರ ಎದುರು ಗೊಳ್ಳಲಿದೆ.

ಆದರೆ, ಈಗಲೇ ಮೈಕ್ರೋಬ್ಲಾಗಿಂಗ್​ ಸೈಟ್ ಟ್ವಿಟರ್​ನಲ್ಲಿ ಪಂದ್ಯದ ಬಗ್ಗೆ ಈಗಾಗಲೇ ಸಾಕಷ್ಟು ಮಾತುಗಳು ಆರಂಭವಾಗಿದೆ. ಟ್ವಿಟರ್​ನಲ್ಲಿ ಟಾಪ್​-ಟ್ರೆಂಡಿಂಗ್​ ಹ್ಯಾಶ್​ಟ್ಯಾಗ್​ ಆಗಿ ಜಾಗವನ್ನು ಪಡೆದುಕೊಳ್ಳುತ್ತಿದೆ.

ಎರಡೂ ಕಡೆಯ ಅಭಿಮಾನಿಗಳು ಮೀಮ್​ಗಳೊಂದಿಗೆ ಯುದ್ಧಕ್ಕೆ ಸಿದ್ಧರಾಗುತ್ತಿದ್ದಾರೆ. ಆಗಾಗ್ಗೆ ಪರಸ್ಪರ ಕೊಟ್ಟುಕೊಳ್ಳುತ್ತಿದ್ದಾರೆ. ವಿರಾಟ್​ ಕೊಹ್ಲಿ ಸುಮಾರು ಆರು ವಾರಗಳ ವಿರಾಮದ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲು ಸಿದ್ಧರಾಗಿದ್ದಾರೆ. ಪಾಕಿಸ್ತಾನದ ಅನುಭವಿ ಸ್ಪಿನ್ನರ್​ ಯಾಸಿರ್​ ಶಾ, ಕೊಯ್ಲಿ ಶಕ್ತಿಯನ್ನು ಚೆನ್ನಾಗಿ ಅರಿತಿದ್ದು, ಏಷ್ಯಾಕಪ್​ನಲ್ಲಿ ವಿರಾಟ್​ ಕೊಹ್ಲಿಯನ್ನು ಕಡಿಮೆ ಅಂದಾಜು ಮಾಡಬೇಡಿ ಎಂದು ತಮ್ಮ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...