alex Certify ಸಂಜೆಯಾಗುತ್ತಲೇ ಹುಡುಗಿ ಮನೆಗೆ ಬಂದ ಯುವಕನಿಂದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಜೆಯಾಗುತ್ತಲೇ ಹುಡುಗಿ ಮನೆಗೆ ಬಂದ ಯುವಕನಿಂದ ಘೋರ ಕೃತ್ಯ

ಥಾಣೆ: ಮದುವೆಯಾಗಲು ನಿರಾಕರಿಸಿದ ಅಪ್ರಾಪ್ತೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಮಹಾರಾಷ್ಟ್ರದ ಭಿವಾಂಡಿ ಪಟ್ಟಣದಲ್ಲಿ ನಡೆದಿದೆ.

ಕಾಮತ್ ಗಹರ್ ಪ್ರದೇಶದ ನಿವಾಸಿಯಾಗಿರುವ ಆರೋಪಿ ಅದೇ ಏರಿಯಾದ ಹುಡುಗಿಗೆ ಒಂದು ವರ್ಷದಿಂದ ಕಾಟ ಕೊಡುತ್ತಿದ್ದ. 14ವರ್ಷದ ಅಪ್ರಾಪ್ತೆಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಆದರೆ, ಬಾಲಕಿ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ ಮಂಗಳವಾರ ಸಂಜೆ ಬಾಲಕಿ ಮನೆಗೆ ತೆರಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ತನ್ನ ಕುತ್ತಿಗೆಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಗಾಯಗೊಂಡ ಆರೋಪಿ ಮತ್ತು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆ ಪಡೆದ ನಂತರ ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಆರೋಪಿಯನ್ನು ಭಿವಾಂಡಿ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...