alex Certify ಭ್ರಷ್ಟ ಪೊಲೀಸರಿಗೆ ಬಿಸಿ ಮುಟ್ಟಿಸಲು ಮುಂದಾದ ಯೋಗಿ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭ್ರಷ್ಟ ಪೊಲೀಸರಿಗೆ ಬಿಸಿ ಮುಟ್ಟಿಸಲು ಮುಂದಾದ ಯೋಗಿ ಸರ್ಕಾರ

Yogi Govt to Forcefully Retire Corrupt and Non-Performing Policemen in Uttar  Pradesh

ಭ್ರಷ್ಟ ಪೊಲೀಸರಿಗೆ ಕಡ್ಡಾಯ ನಿವೃತ್ತಿ ನೀಡುವ ಕ್ರಮಕ್ಕೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಕ್ರಮ ಕೈಗೊಂಡಿದೆ. ಪೊಲೀಸರ ಪಟ್ಟಿಯನ್ನು ಕಳುಹಿಸುವಂತೆ ಡಿಜಿಪಿ ಹೆಡ್ಕ್ವಾರ್ಟರ್ ಎಲ್ಲಾ ಪೊಲೀಸ್ ಘಟಕಗಳು, ಎಲ್ಲಾ ಐಜಿ ಶ್ರೇಣಿಗಳು ಮತ್ತು ಎಡಿಜಿ ವಲಯಗಳ ಮುಖ್ಯಸ್ಥರಿಗೆ ಪತ್ರ ಬರೆದಿದೆ. 50 ವರ್ಷ ತುಂಬಿದ ಪೊಲೀಸ್ ಸಿಬ್ಬಂದಿಯನ್ನು ಪರೀಕ್ಷಿಸಲು ಸೂಚನೆಗಳನ್ನು ನೀಡಲಾಗಿದೆ.

ಕಡ್ಡಾಯ ನಿವೃತ್ತಿ ನೀಡಲು ಕಾನ್‌ಸ್ಟೆಬಲ್ ಹುದ್ದೆಯಿಂದ ಇನ್ಸ್‌ಪೆಕ್ಟರ್‌ವರೆಗಿನ ಪೊಲೀಸರನ್ನು ಪರೀಕ್ಷಿಸಲಾಗುತ್ತದೆ. ಮತ್ತೊಂದೆಡೆ, ಯೋಗಿ ಸರ್ಕಾರದ ಈ ದೊಡ್ಡ ಕ್ರಮದ ನಂತರ, ಯುಪಿ ಭ್ರಷ್ಟ ನೌಕರರ ಮೇಲೆ ದೃಷ್ಟಿ ಹರಿಸಲಿದೆ.

ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು 50 ವರ್ಷ ದಾಟಿದ ಸಿಬ್ಬಂದಿ ಕೆಲಸವನ್ನು ಪರಿಶೀಲಿಸಲಿದ್ದಾರೆ. ಜುಲೈ 31 ರೊಳಗೆ ಅಂತಹ ನೌಕರರ ಪಟ್ಟಿಯನ್ನು ಸಿದ್ಧಪಡಿಸುವಂತೆ ತಿಳಿಸಲಾಗಿತ್ತು. ಈಗಾಗಲೇ 30 ಅಧಿಕಾರಿಗಳು ಗುರುತಿಸಲಾಗಿದ್ದು, ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗುವುದು ಎಂದು ಮೂಲಗಳು ಹೇಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...