alex Certify ಗೊಂದಲಕ್ಕೆ ಕಾರಣವಾಯ್ತು ಮದುವೆ ಮಂಟಪದಲ್ಲಿ ವಧು ಮಾಡಿದ ಕಾರ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೊಂದಲಕ್ಕೆ ಕಾರಣವಾಯ್ತು ಮದುವೆ ಮಂಟಪದಲ್ಲಿ ವಧು ಮಾಡಿದ ಕಾರ್ಯ…!

ಕೋವಿಡ್-19 ಸಾಂಕ್ರಾಮಿಕ ಜಗತ್ತಿನೆಲ್ಲೆಡೆ ತಾಂಡವ ನೃತ್ಯ ಮಾಡುತ್ತಿರುವ ಕಾರಣ ಎಲ್ಲೆಡೆ ಮನೆಯಿಂದಲೇ ಕೆಲಸ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಇಂಥ ಪರಿಸ್ಥಿತಿಯ ನಡುವೆ ವೃತ್ತಿಪರ ಹಾಗೂ ವೈಯಕ್ತಿಕ ಜೀವನಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ.

ಮದುವಣಗಿತ್ತಿಯೊಬ್ಬಳು ಮಂಟಪದ ಮೇಲೆ ಕುಳಿತಿರುವಾಗಲೇ ತೊಡೆಯ ಮೇಲೆ ಲ್ಯಾಪ್‌ಟಾಪ್‌ ಹಿಡಿದುಕೊಂಡು ಫೋನ್‌ನಲ್ಲಿ ಮಾತನಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

ನವದಂಪತಿಗಳಿಬ್ಬರೂ ತಮ್ಮ ಮದುವೆಯ ನೇರ ಪ್ರಸಾರವನ್ನು ಝೂಮ್‌ ಕಾಲ್ ಮೂಲಕ ತಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಬಳಗಕ್ಕೆ ಬಿತ್ತರಿಸಲು ಯತ್ನಿಸುತ್ತಿರಬಹುದು ಎಂದು ನೆಟ್ಟೆಗರು ಕಾಮೆಂಟ್ ಸೆಕ್ಷನ್‌ನಲ್ಲಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...