alex Certify ಶವ ಸಾಗಿಸಲು ಮುಂದೆ ಬಾರದ ಆಂಬುಲೆನ್ಸ್​..! ತಾಯಿ ಶವವನ್ನ ಬೈಕಿನಲ್ಲೇ ಸಾಗಿಸಿದ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶವ ಸಾಗಿಸಲು ಮುಂದೆ ಬಾರದ ಆಂಬುಲೆನ್ಸ್​..! ತಾಯಿ ಶವವನ್ನ ಬೈಕಿನಲ್ಲೇ ಸಾಗಿಸಿದ ಪುತ್ರ

ಮೃತ ದೇಹವನ್ನ ಸಾಗಿಸಲು ಯಾವುದೇ ಆಂಬುಲೆನ್ಸ್ ಹಾಗೂ ಆಟೋ ಸಿಗದ ಕಾರಣ ವ್ಯಕ್ತಿಯೊಬ್ಬರು ತಮ್ಮ ಕುಟುಂಬಸ್ಥರ ಸಹಾಯದಿಂದ ತಾಯಿಯ ಶವವನ್ನ ಬೈಕ್​ನಲ್ಲಿ ಸಾಗಿಸಿದ್ದಾರೆ. ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಈ ದಾರುಣ ಘಟನೆ ನಡೆದಿದೆ.

ಕುಗ್ರಾಮವೊಂದರ ನಿವಾಸಿಯಾಗಿದ್ದ 50 ವರ್ಷದ ಜಿ. ಚೆಂಚು ಅಸ್ವಸ್ಥರಾಗಿದ್ದರು. ಕೂಡಲೇ ಆಕೆಯ ಪುತ್ರ ನರೇಂದ್ರ ಹಾಗೂ ಅಳಿಯ ರಮೇಶ್​​ ನೀಲಾಮಣಿ ದುರ್ಗಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ಚೆಂಚುಗೆ ಸಿಟಿ ಸ್ಕ್ಯಾನ್​​ಗಾಗಿ ಡಯಾಗ್ನೊಸ್ಟಿಕ್​ ಕೇಂದ್ರಕ್ಕೆ ಹೋಗುವಂತೆ ಸೂಚನೆ ನೀಡಲಾಯ್ತು.

ಸಾರ್ವಜನಿಕರೇ ಎಚ್ಚರ: ʼಗೂಗಲ್​ʼನಲ್ಲಿ ಅಪ್ಪಿತಪ್ಪಿಯೂ ಹುಡುಕಬೇಡಿ ಈ ವಿಷಯ

ಶ್ರೀ ಕೃಷ್ಣ ಡಯಾಗ್ನೊಸ್ಟಿಕ್​ ಕೇಂದ್ರದಲ್ಲಿ ಈಕೆಗೆ ಸ್ಕ್ಯಾನಿಂಗ್​ ಮಾಡಲಾಯ್ತು. ಈಕೆಯ ಸ್ಕ್ಯಾನಿಂಗ್​ ರಿಪೋರ್ಟ್ ಬರೋದಕ್ಕೂ ಮುನ್ನವೇ ಆಕೆ ಕೊನೆಯುಸಿರೆಳೆದಿದ್ದಾಳೆ. ಈ ಘಟನೆ ಬಳಿಕ ಡಾ. ಮೋಹನ್​ ಬಾಬು ಎಂಬವರು ಚೆಂಚು ಕೋವಿಡ್​ ಲಕ್ಷಣವನ್ನ ಹೊಂದಿದ್ದರು ಎಂದು ಹೇಳಿದ್ದಾರೆ. ಆಕೆಯ ಶವ ಸಾಗಿಸಲು ಯಾರೂ ಮುಂದೆ ಬಾರದ ಕಾರಣ ಪುತ್ರ ಹಾಗೂ ಅಳಿಯ ಬೈಕ್​ನಲ್ಲಿಯೇ ಶವವನ್ನ ಸಾಗಿಸಿದ್ದಾರೆ. ಈಕೆಯ ಅಂತ್ಯಕ್ರಿಯೆಯನ್ನ ಕೋವಿಡ್​ ಮಾರ್ಗಸೂಚಿಯಂತೆ ನೆರವೇರಿಸಲಾಗಿದೆ. ಚೆಂಚು ಶವವನ್ನ ಬೈಕ್​ನಲ್ಲಿ ಸಾಗಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...