alex Certify ಸಾರ್ವಜನಿಕರೇ ಎಚ್ಚರ: ʼಗೂಗಲ್​ʼನಲ್ಲಿ ಅಪ್ಪಿತಪ್ಪಿಯೂ ಹುಡುಕಬೇಡಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೇ ಎಚ್ಚರ: ʼಗೂಗಲ್​ʼನಲ್ಲಿ ಅಪ್ಪಿತಪ್ಪಿಯೂ ಹುಡುಕಬೇಡಿ ಈ ವಿಷಯ

ಕೊರೊನಾ ಕಾಲದಲ್ಲಿ ಇಂಟರ್ನೆಟ್​​ನ ಬಳಕೆ ಅತಿಯಾಗಿದೆ. ಇದೇ ವೇಳೆಯಲ್ಲಿ ಆನ್​ಲೈನ್​ ಫ್ರಾಡ್​ ಕೂಡ ಹೆಚ್ಚಾಗಿದೆ. ಹ್ಯಾಕರ್ಸ್ ಗೂಗಲ್​ನ ಸಹಾಯದಿಂದ ಅನೇಕ ಮಂದಿಯನ್ನ ಸೈಬರ್​ ಕ್ರೈಂ ಬಲಿಪಶುಗಳನ್ನಾಗಿ ಮಾಡ್ತಿದ್ದಾರೆ. ನೀವು ಗೂಗಲ್​ನಲ್ಲಿ ಸರ್ಚ್ ಮಾಡುವ ಕೆಲ ವಿಚಾರಗಳು ಮುಂದೊಂದು ದಿನ ನಮ್ಮನ್ನ ಭಾರೀ ದೊಡ್ಡ ಸಂಕಷ್ಟಕ್ಕೀಡುಮಾಡಬಹುದು. ಇಂತಹ ಕೆಲ ಗೂಗಲ್​ ಸರ್ಚ್​ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೊರೊನಾ ಕಾಲದಿಂದಾಗಿ ಆನ್​ಲೈನ್​ ಬ್ಯಾಂಕಿಂಗ್​ ಹಾಗೂ ವ್ಯವಹಾರ ಮೊದಲಿಗಿಂತ ಹೆಚ್ಚಾಗಿದೆ . ಇದರಿಂದ ಲಾಭ ಅನೇಕ ಇದೆ. ಆದರೆ ಲಾಭದ ಜೊತೆಯಲ್ಲಿ ಅಪಾಯವೂ ಕಾದಿದೆ ಎಂಬುದನ್ನ ನೀವು ಮರೆಯೋ ಹಾಗಿಲ್ಲ. ಆನ್​ಲೈನ್​ ಫ್ರಾಡ್​ ಮಾಡುವ ಹ್ಯಾಕರ್ಸ್​ ಬ್ಯಾಂಕ್​ ರೀತಿಯಲ್ಲೇ ಯುಆರ್​ಎಲ್​ ಮಾಡುತ್ತಾರೆ. ಇದಾದ ಬಳಿಕ ನಾವು ಯಾವಾಗ ಬ್ಯಾಂಕ್​ನ ಹೆಸರನ್ನ ಹಾಕುತ್ತೆವೇಯೋ ಆಗೆಲ್ಲ ಹ್ಯಾಕರ್ಸ್​ನ ಗಾಳಕ್ಕೆ ಸಿಲುಕುತ್ತೇವೆ. ಈ ಮೂಲಕ ನಮ್ಮ ಖಾತೆಯಿಂದ ಹಣವನ್ನ ದೇಪೋದು ಅವರಿಗೆ ತುಂಬಾನೇ ಸುಲಭದ ಕೆಲಸವಾಗಿ ಬಿಡುತ್ತೆ. ಹೀಗಾಗಿ ಗೂಗಲ್​ನಲ್ಲಿ ಎಂದಿಗೂ ಬ್ಯಾಂಕ್​ ವ್ಯವಹಾರ ಮಾಡಲೇಬೇಡಿ. ಬ್ಯಾಂಕ್​ಗಳ ಅಧಿಕೃತ ವೆಬ್​ಸೈಟ್​ ಹಾಗೂ ಅಪ್ಲಿಕೇಶನ್​ಗಳ ಮೂಲಕವೇ ನಿಮ್ಮ ವ್ಯವಹಾರಗಳನ್ನ ನಡೆಸಿ.

ನಾವು ಯಾವುದೇ ಸಹಾಯವಾಣಿಗಳ ಸಂಖ್ಯೆ ಬೇಕು ಅಂದರೆ ಸಾಕು ಗೂಗಲ್​ನಲ್ಲಿ ಸರ್ಚ್ ಮಾಡುತ್ತೇವೆ.  ಈ ಕಾರಣದಿಂದಲೇ ಅನೇಕರು ಸೈಬರ್ ಕ್ರೈಂಗೆ ಗುರಿಯಾಗಿದ್ದಾರೆ. ಹ್ಯಾಕರ್ಸ್ ಕಂಪನಿಯ ನಕಲಿ ವೆಬ್​ಸೈಟ್​ಗಳನ್ನ ತಯಾರಿಸಿ ಸುಳ್ಳು ಸಹಾಯವಾಣಿ ಸಂಖ್ಯೆಯನ್ನ ಗೂಗಲ್​ನಲ್ಲಿ ಹರಿಬಿಟ್ಟಿರ್ತಾರೆ. ಹೀಗಾಗಿ ಎಂದಿಗೂ ಗೂಗಲ್​ನಲ್ಲಿ ಕಸ್ಟಮರ್​ ಕೇರ್​ ಸಂಖ್ಯೆಯನ್ನ ಹುಡುಕಲು ಹೋಗಬೇಡಿ. ಕಂಪನಿಯ ಅಧಿಕೃತ ವೆಬ್​ಸೈಟ್​ ಮೂಲಕವೇ ಸಹಾಯವಾಣಿ ಸಂಖ್ಯೆಯನ್ನ ಪಡೆಯಿರಿ .

ಬಹುತೇಕ ಎಲ್ಲಾ ಮಂದಿ ಗೂಗಲ್​ನ್ನು ವೈದ್ಯನಂತೆ ಪರಿಗಣಿಸ್ತಾರೆ. ಯಾವುದೇ ರೋಗ ಕಾಣಿಸಿಕೊಳ್ತು ಅಂದರೂ ಸಹ ಅನೇಕರು ಗೂಗಲ್​ನಲ್ಲಿ ಸರ್ಚ್​ ಮಾಡೋಕೆ ಶುರು ಮಾಡ್ತಾರೆ, ಆದರೆ ನೀವು ಈ ರೀತಿಯ ಕೆಲಸ ಮಾಡೋದ್ರಿಂದ ಭಾರೀ ದೊಡ್ಡ ಸಂಕಷ್ಟಕ್ಕೆ ಸಿಲುಕಲಿದ್ದೀರಿ. ರೋಗದ ಬಗ್ಗೆ ಮಾಹಿತಿಯನ್ನ ಪಡೆದುಕೊಳ್ಳೋದು ತಪ್ಪಲ್ಲ. ಆದರೆ ಗೂಗಲ್​ನಿಂದ ಸಹಾಯ ಪಡೆದು ತೆಗೆದುಕೊಳ್ಳುವ ಚಿಕಿತ್ಸೆ ಹಾಗೂ ಔಷಧಿಗಳು ಜೀವಕ್ಕೆ ಕಂಟಕವಾಗಿ ಪರಿಣಮಿಸಿದ ಸಾಕಷ್ಟು ಉದಾಹರಣೆಗಳಿವೆ.

ಕೇಂದ್ರ ಸರ್ಕಾರ ಡಿಜಿಟಲ್​ ಇಂಡಿಯಾವನ್ನ ಉತ್ತೇಜಿಸುವ ಸಲುವಾಗಿ ಅನೇಕ ಯೋಜನೆಗಳ ಬಗೆಗಿನ ಮಾಹಿತಿಯನ್ನ ಇಂಟರ್ನೆಟ್​ನಲ್ಲಿ ಹರಿಬಿಡ್ತಾರೆ. ಈ ಎಲ್ಲಾ ಯೋಜನೆಗಳಿಗೆ ಕೇಂದ್ರ ಸರ್ಕಾರದ್ದೇ ಅಧಿಕೃತ ವೆಬ್​ಸೈಟ್​ಗಳು ಇರುತ್ತವೆ. ಈ ವೆಬ್​ಸೈಟ್​ ಮೂಲಕ ನೀವು ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. ಆದರೆ ಕೆಲ ಹ್ಯಾಕರ್ಸ್ ಸರ್ಕಾರದ ವೆಬ್​ಸೈಟ್​ಗಳಿಗೇ ಹೋಲುವಂತಹ ನಕಲಿ ವೆಬ್​ಸೈಟ್​ಗಳನ್ನ ಸೃಷ್ಟಿ ಮಾಡಿರ್ತಾರೆ . ಹೀಗಾಗಿ ಇವುಗಳಿಂದ ಎಚ್ಚರ ವಹಿಸೋದು ತುಂಬಾನೇ ಅಗತ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...