alex Certify ಮಗಳ ಮುಂದೆಯೇ ಫೇಸ್ಬುಕ್‌ ಸ್ನೇಹಿತನಿಂದ ಹತ್ಯೆಗೀಡಾದ ಮಹಿಳೆ: ಸಿಸಿ ಟಿವಿಯಲ್ಲಿ ಎದೆ ನಡುಗಿಸುವ ದೃಶ್ಯ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಮುಂದೆಯೇ ಫೇಸ್ಬುಕ್‌ ಸ್ನೇಹಿತನಿಂದ ಹತ್ಯೆಗೀಡಾದ ಮಹಿಳೆ: ಸಿಸಿ ಟಿವಿಯಲ್ಲಿ ಎದೆ ನಡುಗಿಸುವ ದೃಶ್ಯ ಸೆರೆ

ತನ್ನ ಆರು ವರ್ಷದ ಮಗಳ ಮುಂದೆಯೇ 26 ವರ್ಷದ ಮಹಿಳೆಯೊಬ್ಬರನ್ನು ಚೂರಿಯಲ್ಲಿ ಇರಿದು ಕೊಲೆ ಮಾಡಿದ ಘಟನೆ ಮಧ್ಯ ಪ್ರದೇಶದ ಗ್ಯಾನ್‌ಶೀಲ್ ಸೂಪರ್‌ ಸಿಟಿ ಪ್ರದೇಶದಲ್ಲಿ ಘಟಿಸಿದೆ.

ಈ ಬರ್ಬರ ಕೊಲೆಯ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿರುವ ತನ್ನ ತಾಯಿಯತ್ತ ಮಗಳು ಗಾಬರಿಗೊಂಡು ಓಡಿ ಬರುತ್ತಿರುವ ಹೃದಯ ವಿದ್ರಾವಕ ದೃಶ್ಯಾವಳಿಯನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದೇ ವೇಳೆ ಕೊಲೆಗಾರ ತನ್ನ ಸ್ಕೂಟರ್‌ನಲ್ಲಿ ಓಡಿ ಹೋಗುವುದು ಸಹ ದಾಖಲಾಗಿದೆ.

ಆಪಾದಿತ ಸೌರಭ್ ಗೋಲು ಗೋತ್ರೆಯನ್ನು ಬಂಧಿಸಲಾಗಿದೆ. “ಕುಡಿದ ಮತ್ತಿನಲ್ಲಿದ್ದ ಆತ, ಆಕೆ ಸರಿಯಾಗಿ ಮಾತನಾಡುತ್ತಿರಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿನಲ್ಲಿ ಹೀಗೆ ಮಾಡಿದ್ದಾನೆ” ಎಂದು ತನಿಖಾಧಿಕಾರಿ ಇಂದ್ರಮಣಿ ಪಟೇಲ್ ತಿಳಿಸಿದ್ದಾರೆ.

ತನ್ನ ಮನೆ ಇರುವ ಪ್ರದೇಶದಲ್ಲಿ ಖಾಲಿ ಜಾಗಕ್ಕೆ ಬರಲು ಪ್ರಿಯಾಗೆ ತಿಳಿಸಿದ ಸೌರಭ್, ಆ ಜಾಗಕ್ಕೆ ಆಕೆ ತನ್ನ ಮಗಳೊಂದಿಗೆ ಬರುತ್ತಲೇ, ಆಕೆಯೊಂದಿಗೆ ಜಗಳಕ್ಕೆ ಮುಂದಾಗಿ ಕತ್ತರಿಯಿಂದ ಆಕೆಯ ಕುತ್ತಿಗೆ ಹಾಗೂ ಮುಖದ ಮೇಲೆ ದಾಳಿ ಮಾಡಿದ್ದಾನೆ ಎಂದು ಎಎಸ್‌ಪಿ ರಾಜೇಶ್ ರಘುವಂಶಿ ತಿಳಿಸಿದ್ದಾರೆ.

ಹತ್ತಿರದಲ್ಲಿದ್ದ ಅಂಗಡಿಯೊಂದರ ಸಿಸಿ ಟಿವಿ ಕ್ಯಾಮೆರಾ ಮೂಲಕ ಕೊಲೆಗಾರನ ಗುರುತು ಪತ್ತೆ ಮಾಡಲಾಗಿದೆ. ಕೊಲೆಯಾದ ಮಹಿಳೆ ಹಾಗೂ ಆಕೆಯ ಕೊಲೆಗಾರ ಇಬ್ಬರೂ ಸಹ ಫೇಸ್ಬುಕ್‌ ಮೂಲಕ ಪರಿಚಿತರಿದ್ದರು ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...