alex Certify ಅಕ್ರಮ ಸಂಬಂಧಕ್ಕೆ ಪತಿಯನ್ನೇ ಕೊಲೆಗೈದ ಪಾಪಿ ಪತ್ನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧಕ್ಕೆ ಪತಿಯನ್ನೇ ಕೊಲೆಗೈದ ಪಾಪಿ ಪತ್ನಿ….!

ಪ್ರಿಯತಮನ ಜೊತೆ ಸೇರಿಕೊಂಡು ಪತ್ನಿಯೇ ತನ್ನ ಪತಿಯನ್ನ ಕೊಲೆಗೈದು ಬಳಿಕ ಶವವನ್ನ ಕಾಲುವೆಯಲ್ಲಿ ಬಿಸಾಡಿದ ಘಟನೆ ವಾರಂಗಲ್​ನಲ್ಲಿ ನಡೆದಿದೆ.

ಪತಿ ತಲ್ಲಪಲ್ಲಿ ಅನಿಲ್​​ರನ್ನ ಕೊಲೆ ಮಾಡಿದ ಪತ್ನಿ ತಲ್ಲಪಲ್ಲಿ ಪೂಜಿತಾ ತಾನೇ ಪೊಲೀಸ್​ ಠಾಣೆಗೆ ತೆರಳಿ ಪತಿ ಕಾಣೆಯಾಗಿದ್ದಾರೆ ಎಂದು ದೂರನ್ನ ದಾಖಲಿಸಿದ್ದಳು.

ಹನಮ್​ಕೊಂಡಾ ಡ್ಯಾನಿ ಎಂಬಾತನ ಜೊತೆ ಪೂಜಿತಾ ಅಕ್ರಮ ಸಂಬಂಧ ಹೊಂದಿದ್ದಳು. ಜನವರಿ 22ನೇ ತಾರೀಖಿನಂದು ಡ್ಯಾನಿ, ಮತ್ತಾತನ ಸಹೋದರಿ ಕೊಟ್ಟಿ ಸುಧಾಮಣಿ ಹಾಗೂ ಹನಮ್​ಕೊಂಡ ಸತೀಶ್​ ಎಂಬವರು ಸೇರಿ ಕೊಲೆಗೈದಿದ್ದಾರೆ. ಕೊನೆಗೂ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರು ನಾಲ್ವರು ಆರೋಪಿಗಳನ್ನ ಶುಕ್ರವಾರ ಬಂಧಿಸಿದ್ದಾರೆ.

ಡ್ಯಾನಿ ಹಾಗೂ ಸತೀಶ್​ ವಾಡೆಪಲ್ಲಿ ಬಳಿ ಅನಿಲ್​ನನ್ನ ಕರೆದುಕೊಂಡು ಹೋಗಿ ಚೆನ್ನಾಗಿ ಮದ್ಯವನ್ನ ಕುಡಿಸಿದ್ದಾರೆ. ಇದಾದ ಬಳಿಕ ಆತನ ಅಂಗಿಯಿಂದ ಅವನ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಮೃತ ದೇಹವನ್ನ ಕಾಲುವೆಯಲ್ಲಿ ಎಸೆದಿದ್ದಾರೆ.

ಜನವರಿ 29ನೇ ತಾರೀಖಿನಂದು ರಾಯಪರ್ತಿ ಮಂಡಲದ ಮೈರಾಲಂ ಜಲಾಶಯದಲ್ಲಿ ಶವ ತೇಲುತ್ತಿರೋದು ಕಂಡು ಬಂದ ಬಳಿಕ ಪೊಲೀಸರು ಶವವನ್ನ ಹೊರ ತೆಗೆದಿದ್ದಾರೆ. ಇದಾದ ಬಳಿಕ ಅನಿಲ್​ ಸಂಬಂಧಿಯೊಬ್ಬರು ಪ್ರಕರಣದಲ್ಲಿ ಪೂಜಿತಾ ಕೈವಾಡ ಇರೋದ್ರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರಿಗೆ ಪೂಜಿತಾ ಅಕ್ರಮ ಸಂಬಂಧದ ಬಗ್ಗೆ ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...