alex Certify ವ್ಯಾಯಾಮದ ಜೊತೆ ಕಾಳು ಪುಡಿ ಮಾಡ್ತಿದ್ದಾಳೆ ಈ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಯಾಮದ ಜೊತೆ ಕಾಳು ಪುಡಿ ಮಾಡ್ತಿದ್ದಾಳೆ ಈ ಮಹಿಳೆ

News

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸ್ವಾಭಿಮಾನಿ ಭಾರತ ಹೇಳಿಕೆ ನಂತ್ರ ಜನರು ಇದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಇಲ್ಲೊಬ್ಬ ಮಹಿಳೆಯ ವಿಡಿಯೋ ವೈರಲ್ ಆಗ್ತಿದೆ. ಈ ಮಹಿಳೆ ಸ್ಥಳೀಯರನ್ನು ಉತ್ತೇಜಿಸುವುದಲ್ಲದೆ, ಫಿಟ್ ಇಂಡಿಯಾ ಮೂವ್‌ಮೆಂಟ್’ ಬಗ್ಗೆಯೂ ಗಮನ ಹರಿಸುತ್ತಿದ್ದಾಳೆ.

ಮಧ್ಯಪ್ರದೇಶದ ಮಹಿಳೆ ವಿಡಿಯೋ ಇದಾಗಿದೆ. ಇದ್ರಲ್ಲಿ ದೈಹಿಕ ವ್ಯಾಯಾಮದ ಜೊತೆ ಮಹಿಳೆ ಬೇರೆ ಕೆಲಸವನ್ನೂ ಮಾಡ್ತಿದ್ದಾಳೆ. ಆದ್ರೆ ಸಾಮಾನ್ಯರಂತೆ ಅಲ್ಲ. ವಿಶೇಷ ರೀತಿಯಲ್ಲಿ ಕೆಲಸ ಮಾಡ್ತಿದ್ದಾಳೆ. ದೈಹಿಕ ವ್ಯಾಯಾಮದ ಮಶಿನನ್ನು ಆಕೆ ಯಂತ್ರದಂತೆ ಬದಲಿಸಿದ್ದಾಳೆ.

ಈ ಯಂತ್ರ ಕಾಳುಗಳನ್ನು ಪುಡಿ ಮಾಡುತ್ತದೆ. ಮಹಿಳೆ ಪೆಡೆಲ್ ನಿಂದ ಕಾಳುಗಳು ಹುಡಿಯಾಗುತ್ತವೆ. ಕೆಲಸವೂ ಆಯ್ತು, ವ್ಯಾಯಾಮವೂ ಆಯ್ತು. ಮಹಿಳೆಯರು ಜಿಮ್ ಗೆ ಹೋಗಿ ವ್ಯಾಯಾಮ ಮಾಡಬೇಕಾಗಿಲ್ಲ. ಮನೆಯಲ್ಲಿಯೇ ಎರಡೂ ಕೆಲಸ ಮಾಡಬಹುದು ಎಂಬುದನ್ನು ಈಕೆ ತೋರಿಸಿದ್ದಾಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...