alex Certify ಮರುಭೂಮಿಯಲ್ಲಿದೆ ಏಷ್ಯಾದ‌ ಅತಿ ದೊಡ್ಡ ಗ್ರಂಥಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರುಭೂಮಿಯಲ್ಲಿದೆ ಏಷ್ಯಾದ‌ ಅತಿ ದೊಡ್ಡ ಗ್ರಂಥಾಲಯ

ಜಗತ್ತಿನಲ್ಲಿ ಹಲವು ವಿಶಿಷ್ಟ ಗ್ರಂಥಾಲಯಗಳಿವೆ. ಆದರೆ, ರಾಜಸ್ಥಾನದ ಮರುಭೂಮಿಯಲ್ಲಿ ಭೂಮಿಯ 16 ಅಡಿ ಕೆಳಗಿರುವ. ಗ್ರಂಥಾಲಯ ಓದುಗರಿಗೆ ಅಪರೂಪದ ಅನುಭವ ನೀಡುತ್ತದೆ.

ಜೈಸಲ್ಮೇರ್ ಜಿಲ್ಲೆಯ ಪೊಕ್ರಾನ್ ತಾಲೂಕಿನ ಬಾದರಿಯಾ ಗ್ರಾಮದ ದೇವಸ್ಥಾನವೊಂದರ ಅಡಿ ಇರುವ ಮಹೋನ್ನತ ಗ್ರಂಥಾಲಯದಲ್ಲಿ 4 ಸಾವಿರ ಆಸನ ವ್ಯವಸ್ಥೆ ಇದೆ. 9 ಲಕ್ಷ ಪುಸ್ತಕಗಳಿದ್ದು, ಓದುಗರಿಗೆ ಇದೊಂದು ಅಪೂರ್ವ ನಿಧಿಯಂತಾಗಿದೆ.

ಉರಿ ಬೇಸಿಗೆಯಲ್ಲೂ ಇಲ್ಲಿ ತಂಪಾದ ವಾತಾವರಣವಿರುತ್ತದೆ. 562 ಶೆಲ್ಪ್ ಗಳಲ್ಲಿ, ಜ್ಯೋತಿಃಶಾಸ್ತ್ರದಿಂದ ಹಿಡಿದು ಖಗೋಳ ಶಾಸ್ತ್ರದವರೆಗೆ, ವಿಜ್ಞಾನದಿಂದ ಹಿಡಿದು ಧರ್ಮ‌ ಗ್ರಂಥ, ಇತಿಹಾಸ ಪುಸ್ತಕದವರೆಗೆ ಎಲ್ಲವೂ ಇಲ್ಲಿ ಲಭ್ಯ.

ಸುಮಾರು 1998 ರ ಹೊತ್ತಿಗೆ‌ ಪಂಜಾಬ್ ನ ಹರ್ ಬಾನ್ಶಾ ಸಿಂಗ್ ನಿರ್ಮಲ್ ಅಕಾ ಬಾದರಿಯಾ ಮಹಾರಾಜ ಈ ಗ್ರಂಥಾಲಯ ನಿರ್ಮಿಸಿದರು. ಅವರ ನೇತೃತ್ವದ ಜಗದಂಬಾ ಸೇವಾ ಸಮಿತಿ ದೇವಸ್ಥಾನವನ್ನೂ ನಿರ್ಮಿಸಲು ನಿರ್ಣಯಿಸಿತು.  ಬಾದರಿಯಾ ಮಹಾರಾಜ ಹಲವು ವರ್ಷ ಈ ಗ್ರಂಥಾಲಯದ ಒಂದು ಕೋಣೆಯಲ್ಲೇ ಉಳಿದು ಬಹುತೇಕ ಎಲ್ಲ ಪುಸ್ತಕವನ್ನು ಓದಿ ಮುಗಿಸಿದರು. ಈಗ ದೇವಸ್ಥಾನ ಸಮಿತಿಯೇ ಗ್ರಂಥಾಲಯದ ಮೇಲುಸ್ತುವಾರಿಯನ್ನೂ ನೋಡಿಕೊಳ್ಳುತ್ತಿದೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...