alex Certify ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ 31 ಲಕ್ಷ ರೂ. ಖರ್ಚು ಮಾಡಿ ಪತ್ನಿ ಕೆನಡಾಗೆ ಕಳುಹಿಸಿದ್ದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ 31 ಲಕ್ಷ ರೂ. ಖರ್ಚು ಮಾಡಿ ಪತ್ನಿ ಕೆನಡಾಗೆ ಕಳುಹಿಸಿದ್ದ ವ್ಯಕ್ತಿ

ಪಂಜಾಬ್ ನ ಮೊಗಾದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೆನಡಾಕ್ಕೆ ಕಳುಹಿಸಿದ್ದಾನೆ. ಇದಕ್ಕಾಗಿ 31 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಮೂರು ದಿನಗಳ ಕಾಲ ವಧುವಾಗಿದ್ದ ಹುಡುಗಿ ಕೆನಡಾ ತಲುಪುತ್ತಿದ್ದಂತೆ ತನ್ನ ವರಸೆ ಬದಲಿಸಿದ್ದಾಳೆ. ಹತ್ತು ದಿನಗಳ ನಂತ್ರ ಪತಿ ಫೋನ್ ಮಾಡ್ತಿದ್ದಂತೆ ಬೆದರಿಕೆ ಹಾಕಿದ್ದಾಳೆ. ಮತ್ತೆ ಫೋನ್ ಮಾಡಿದ್ರೆ ಪೊಲೀಸರಿಗೆ ದೂರು ನೀಡ್ತೇನೆ ಎಂದಿದ್ದಾಳೆ.

ನೊಂದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ. ಯುವತಿ, ಆಕೆ ತಂದೆ, ತಾಯಿ, ಅತ್ತೆ, ಮಾವನ ವಿರುದ್ಧ ದೂರು ನೀಡಿದ್ದಾನೆ. ಮಾರ್ಚ್ 11ರಂದೇ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದ. ಆದ್ರೆ ಪೊಲೀಸರು 11 ತಿಂಗಳ ನಂತ್ರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿ ಹೊರತುಪಡಿಸಿ ಎಲ್ಲ ಆರೋಪಿಗಳು ಭಾರತದಲ್ಲಿಯೇ ಇದ್ದಾರೆ.

ವಿದ್ಯಾಭ್ಯಾಸಕ್ಕಾಗಿ ಹುಡುಗಿ ಕೆನಡಾಕ್ಕೆ ಹೋಗಲು ಬಯಸಿದ್ದಾಳೆ. ಮದುವೆ ಹಾಗೂ ವಿದೇಶಿ ಪ್ರಯಾಣದ ವೆಚ್ಚ ಭರಿಸಬೇಕು ಎಂದು ಆಕೆ ಅತ್ತೆ-ಮಾವ ಹೇಳಿದ್ದರಂತೆ. ಇದಕ್ಕೆ ಒಪ್ಪಿ ಮದುವೆಯಾಗಿದ್ದ ದಾವಿಂದರ್, ಕೆನಡಾಕ್ಕೆ ಕಳುಹಿಸಲು 31 ಲಕ್ಷ ರೂಪಾಯಿ ಖರ್ಚು ಮಾಡಿದ್ದ. ಕೆನಡಾಕ್ಕೆ ಹೋದ ಮೇಲೆ ಯುವತಿ ಮೋಸ ಮಾಡಿದ್ದಾಳೆ. ಆಕೆ ಪಾಲಕರು ಕೂಡ ದಾವಿಂದರ್ ಗೆ ಸರಿಯಾದ ಮಾಹಿತಿ ನೀಡಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...