alex Certify ಮನೆಯ ಒಳಗೂ ಸನ್​ಗ್ಲಾಸ್​ ಧರಿಸುವುದರ ಹಿಂದಿನ ಕಾರಣ ಬಿಚ್ಚಿಟ್ಟ ಆನಂದ್​ ಮಹೀಂದ್ರಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಒಳಗೂ ಸನ್​ಗ್ಲಾಸ್​ ಧರಿಸುವುದರ ಹಿಂದಿನ ಕಾರಣ ಬಿಚ್ಚಿಟ್ಟ ಆನಂದ್​ ಮಹೀಂದ್ರಾ…..!

ಮನೆಯ ಒಳಗೂ ಸನ್​ಗ್ಲಾಸ್​ ಹಾಕಲು ಆನಂದ್​ ಮಹೀಂದ್ರಾ ಹೊಸ ಕಾರಣವೊಂದನ್ನ ಹುಡುಕಿಕೊಂಡಿದ್ದಾರೆ. ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಟಿ 20 ಸರಣಿಯ ಎರಡನೇ ಪಂದ್ಯವನ್ನ ವೀಕ್ಷಿಸಿದ ಬಳಿಕ ಆನಂದ್​ ಮಹೀಂದ್ರಾ ಈ ನಿರ್ಧಾರಕ್ಕೆ ಬಂದಿದ್ದಾರೆ. ಅಕ್ಷರ್​ ಪಟೇಲ್​ ಧರಿಸುವ ಸನ್​ಗ್ಲಾಸ್​ ಮಾದರಿಯ ಸನ್​ಗ್ಲಾಸ್​​ನ ಫೋಟೋವನ್ನು ಶೇರ್​ ಮಾಡಿದ್ದಾರೆ.

ಮಾರ್ಚ್ 7ರಂದು ಮಾಡಿದ್ದ ಟ್ವೀಟ್​ನ ಸ್ಕ್ರೀನ್​ಶಾಟ್​​ನ್ನು ಆನಂದ್​ ಮಹೀಂದ್ರಾ ಶೇರ್​ ಮಾಡಿದ್ದಾರೆ. ಇದರಲ್ಲಿ ಇಂಗ್ಲೆಂಡ್​ ವಿರುದ್ಧ ಅಹಮದಾಬಾದ್​ನಲ್ಲಿ ನಡೆದಿದ್ದ ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ರದರ್ಶನವನ್ನ ಶ್ಲಾಘಿಸಿದ್ದರು. ಅಲ್ಲದೇ ಈ ಅಕ್ಷರ್​ ಸನ್​ಗ್ಲಾಸ್​ನ್ನು ಎಲ್ಲಿ ಕೊಳ್ಳುವುದೆಂದು ಯಾರಾದರೂ ತಿಳಿಸುತ್ತೀರೇ ಎಂದು ಪ್ರಶ್ನಿಸಿದ್ದರು.

ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದ ಜನ ಸಾಮಾನ್ಯರಿಗೆ ಮುಖ್ಯ ಮಾಹಿತಿ

ಅಕ್ಷರ್​ ಪಟೇಲ್​ರ ಫೋಟೋ ಶೇರ್​ ಮಾಡಿರುವ ಆನಂದ್​ ಮಹೀಂದ್ರಾ ಸರಣಿ ಗೆಲುವಿನ ಪಂದ್ಯ ನೋಡಲು ನಾನು ಈ ಸನ್​ಗ್ಲಾಸ್​​ ಕೊಳ್ಳುತ್ತೇನೆ ಎಂದು ಹೇಳಿದ್ದೆ. ಇದೀಗ ಅಕ್ಷರ್​ ಶೇಡ್​ನ್ನು ಪಡೆದಿದ್ದೇನೆ. ನನಗೂ ಗೊತ್ತು ಟಿವಿ ನೋಡಲು ಯಾವುದೇ ಸನ್​ಗ್ಲಾಸ್​ನ ಅವಶ್ಯಕತೆ ಇಲ್ಲ ಎಂದು. ಆದರೆ ನನ್ನ ಪತ್ನಿ ಕೂಡ ನನ್ನ ಕ್ರೇಜಿ ಎಂದು ಹೇಳುತ್ತಾಳೆ. ಬಹುಶಃ ಈ ಸನ್​​ಗ್ಲಾಸ್​ನಲ್ಲಿ ಅದೃಷ್ಟವಿರಬಹುದು ಎಂದು ಟ್ವೀಟಾಯಿಸಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...