ಓಡಿಶಾದ ಬೆಹರಾಂಪುರದಲ್ಲಿರುವ ಟಿಫನ್ ಸೆಂಟರ್ ಒಂದು ಆಂಟಿ ವೈರಸ್ ಟಿಫಿನ್ ಸೆಂಟರ್ ಎಂದು ಹೆಸರಿಡುವ ಮೂಲಕ ಫೇಮಸ್ ಆಗಿದೆ.
ಬಡ್ ವೈಸರ್ 86 ಎಂಬ ಟ್ವೀಟರ್ ಖಾತೆಯಲ್ಲಿ ಈ ಪೋಸ್ಟ್ ಶೇರ್ ಮಾಡಲಾಗಿದೆ. ನಾನಿಲ್ಲಿ ಸ್ಯಾನಿಟೈಸರ್ ಸೇವಿಸುತ್ತಿಲ್ಲ ಎಂದು ಭಾವಿಸುತ್ತೇನೆ ಅಂತಾ ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ.
ಅಂಗಡಿ ಮುಂದೆ 5-6 ಮಂದಿ ಗ್ರಾಹಕರು ಆಹಾರ ಸೇವಿಸುತ್ತಿದ್ದಾರೆ. ಹಾಗೂ ಅಂಗಡಿ ಮುಂದೆ ಮೆನುವಿನ ಬೋರ್ಡ್ ಹಾಕಲಾಗಿದೆ.
ಇಂತಹ ಹೆಸರನ್ನ ಇಟ್ಟುಕೊಂಡಿರುವ ಈ ಕ್ಯಾಂಟೀನ್ನಲ್ಲಿ ಸಾಮಾಜಿಕ ಅಂತರವಾಗಲಿ ಬಾಣಸಿಗರು ಗ್ಲೌಸ್ ಹಾಗೂ ಮಾಸ್ಕ್ ಧರಿಸಿದ್ದು ಕಂಡು ಬಂದಿಲ್ಲ. ಇದನ್ನ ನೋಡಿದ ಟ್ವೀಟಿಗರು ಕ್ಯಾಂಟೀನ್ ಹೆಸರಿನ ಬಗ್ಗೆ ವ್ಯಂಗ್ಯವಾಡಿದ್ದಾರೆ.