alex Certify ಯಾರಿದು ಖಾನ್​ ಸರ್….? ಏನಿದು ವಿವಾದ….? ಟ್ವಿಟರ್​ನಲ್ಲಿ ಟ್ರೆಂಡ್ ಆಗಿದ್ದರ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರಿದು ಖಾನ್​ ಸರ್….? ಏನಿದು ವಿವಾದ….? ಟ್ವಿಟರ್​ನಲ್ಲಿ ಟ್ರೆಂಡ್ ಆಗಿದ್ದರ ಕುರಿತು ಇಲ್ಲಿದೆ ಮಾಹಿತಿ

ಖಾನ್​ ಸರ್​ ಎಂಬ ಹೆಸರನ್ನ ಹೊಂದಿರುವ ವ್ಯಕ್ತಿಯೊಬ್ಬ ಕಳೆದ ಕೆಲವು ದಿನಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದಾನೆ.

ಯುಟ್ಯೂಬ್​​ನಲ್ಲಿ ಚಂದಾದಾರರಿಂದ ಖಾನ್​ ಸರ್​ ಎಂದೇ ಕರೆಯಿಸಿಕೊಳ್ಳುವ ಈ ವ್ಯಕ್ತಿ ಖಾನ್​ ಜಿಎಸ್​ ರಿಸರ್ಚ್ ಸೆಂಟರ್​ ಎಂಬ ಸ್ವಂತ ಯುಟ್ಯೂಬ್​ ಚಾನೆಲ್​​ನಲ್ಲಿ ಜನರಲ್​ ಸ್ಟಡೀಸ್​ ಸಂಬಂಧಿ ವಿಷಯಗಳ ಬಗ್ಗೆ ವಿವರಣೆ ನೀಡುತ್ತಾರೆ. ಈಗಾಗಲೇ ಖಾನ್​ ಸರ್​ಗೆ 92 ಲಕ್ಷಕ್ಕೂ ಅಧಿಕ ಚಂದಾದಾರರಿದ್ದಾರೆ.

ವಿಭಿನ್ನವಾದ ಕಲಿಸುವ ಶೈಲಿಯಿಂದಾಗಿಯೇ ಖಾನ್ ಸರ್​​ ಯುಟ್ಯೂಬ್​ನಲ್ಲಿ ಚಂದಾದಾರರನ್ನ ಸೆಳೆಯುತ್ತಿದ್ದಾರೆ. ಏಪ್ರಿಲ್​ 24ರಂದು ಖಾನ್​ ಸರ್​ ಫ್ರಾನ್ಸ್ ಹಾಗೂ ಪಾಕಿಸ್ತಾನದ ಸಂಬಂಧದ ಬಗ್ಗೆ ವಿವರಣೆ ನೀಡುವ ವಿಡಿಯೋವನ್ನ ಶೇರ್​ ಮಾಡಿದ್ದರು.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಅಲ್ಲದೇ ಟ್ವಿಟರ್​ನಲ್ಲಿ #ReportonKhanSir ಎಂಬ ಅಭಿಯಾನ ಟ್ರೆಂಡಿಂಗ್​ ಆಗಿತ್ತು. ಟ್ವೀಟಿಗರು ಖಾನ್​ ಸರ್​ ಒಬ್ಬ ಇಸ್ಲಾಮೋಫೋಬಿಕ್​ ಎಂಬ ಅಭಿಪ್ರಾಯವನ್ನ ಹೊರಹಾಕಿದ್ದರು.

ಈ ವಿಚಾರವಾಗಿ ಟ್ವಿಟರ್​ನಲ್ಲಿ ಎರಡು ರೀತಿಯ ಅಭಿಪ್ರಾಯಗಳು ವ್ಯಕ್ತವಾದವು. ಕೆಲವರು ಖಾನ್​ ಸರ್​ ಪರವಾಗಿ ನಿಂತರೆ ಇನ್ನೂ ಕೆಲವರು ಖಾನ್​ ಸರ್​ ವಿರೋಧವಾಗಿ ಮಾತನಾಡಿದ್ದರು.

ಈ ವಿವಾದ ಎಷ್ಟರ ಮಟ್ಟಿಗೆ ಮುಂದುವರೀತು ಅಂದರೆ ನೆಟ್ಟಿಗರು ಖಾನ್​ ಸರ್​ ನಿಜ ನಾಮಧೇಯವನ್ನ ಹುಡುಕೋಕೆ ಆರಂಭಿಸುವಂತೆ ಮಾಡಿತು. ಅನೇಕರು ಖಾನ್​ ಸರ್​ ನಿಜ ನಾಮಧೇಯ ಅಮಿತ್​ ಸಿಂಗ್​ ಎಂದು ಹೇಳಿದ್ರು. ಇನ್ನೂ ಹಲವರು ಫೈಜಲ್​ ಖಾನ್​ ಎಂದು ಹೇಳಿದ್ರು. ಈ ಎರಡೂ ಹೆಸರೂಗಳು ಟ್ವಿಟರ್​ನಲ್ಲಿ ಟ್ರೆಂಡ್​ ಆಗಲು ಶುರುವಾಯಿತು.

ಈ ವಿಚಾರ ಸಂಬಂಧ ಖಾನ್​ ಸರ್​ ಸ್ವತಃ ಯುಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಒಂದನ್ನ ಪೋಸ್ಟ್ ಮಾಡಿದ್ದು ತಮ್ಮ ಹೆಸರಿನ ವಿವಾದಕ್ಕೆ ತೆರೆ ಎಳೆದಿದ್ದಾರೆ. ನನ್ನ ನಿಜವಾದ ಹೆಸರು ಖಾನ್​ ಅಲ್ಲ. ಅಲ್ಲದೇ ಯಾವ ವ್ಯಕ್ತಿಯೂ ಖಾನ್​ ಎಂಬ ಹೆಸರನ್ನ ಹೊಂದಿರೋಕೆ ಸಾಧ್ಯವಿಲ್ಲ. ನಾನು ಎಲ್ಲಿಯೂ ನನ್ನ ನಿಜವಾದ ಹೆಸರನ್ನ ಬಹಿರಂಗ ಮಾಡಿಯೇ ಇಲ್ಲ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...