alex Certify ʼಟೂಲ್ ​ಕಿಟ್ʼ​ ಎಂದರೇನು…? ಇಲ್ಲಿದೆ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಟೂಲ್ ​ಕಿಟ್ʼ​ ಎಂದರೇನು…? ಇಲ್ಲಿದೆ ಒಂದಷ್ಟು ಮಾಹಿತಿ

ಗ್ರೇಟಾ ಥನ್​ಬರ್ಗ್​ರ ಟೂಲ್​ ಕಿಟ್​ ಪ್ರಕರಣದಲ್ಲಿ ಲಿಂಕ್​ ಹೊಂದಿರುವ ಮತ್ತೊಬ್ಬ ಪರಿಸರ ಕಾರ್ಯಕರ್ತೆ 22 ವರ್ಷದ ದಿಶಾ ರವಿಯನ್ನ ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ದಿಶಾ ರವಿಯನ್ನ 5 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

ಬೆಂಗಳೂರು ಮೂಲದ ದಿಶಾ ರವಿಯನ್ನ ದೆಹಲಿ ಸೈಬರ್​ ಕ್ರೈಂ ಪೊಲೀಸರ ತಂಡ ಬೆಂಗಳೂರಿನಲ್ಲಿ ಬಂಧಿಸಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಅನ್ನೋದ್ರ ಬಗ್ಗೆ ಟೂಲ್​ ಕಿಟ್​ ತಯಾರಿಸಿದ ಆರೋಪದ ಅಡಿಯಲ್ಲಿ ದಿಶಾರನ್ನ ಬಂಧಿಸಲಾಗಿದೆ.

ಅಲ್ಲದೇ ಬಂಧಿತ ದಿಶಾ ರವಿ ಪ್ರೋ ಖಲಿಸ್ತಾನಿ ಗುಂಪಿನ ಜೊತೆಯೂ ಗುರುತಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ದಿಶಾ ರವಿ ಬಂಧನದ ಬಳಿಕ ಟೂಲ್​ ಕಿಟ್​ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ.

ಟೂಲ್​ ಕಿಟ್​ ಅಂದರೆ ಒಂದು ವಿಷಯದ ಬಗ್ಗೆ ಜಾಗೃತಿ ಮೂಡಿಸಲು ರಚಿಸಲಾಗುವ ಒಂದು ಮಾರ್ಗಸೂಚಿಯಾಗಿದೆ. ಗ್ರೇಟಾ ಥನ್​ಬರ್ಗ್​ ಹಂಚಿಕೊಂಡಿದ್ದ ಟೂಲ್​ ಕಿಟ್​ನಲ್ಲಿ ಭಾರತದಲ್ಲಿ ನಡೆಯುತ್ತಿರೋ ರೈತ ಪ್ರತಿಭಟನೆ ಬಗ್ಗೆ ಏನೂ ಮಾಹಿತಿ ಇಲ್ಲದವರು ಪರಿಸ್ಥಿತಿಯನ್ನ ಅರಿತುಕೊಂಡು ತಮ್ಮದೇ ಆದ ವಿಶ್ಲೇಷಣೆಯ ಆಧಾರದ ಮೇಲೆ ರೈತರನ್ನ ಹೇಗೆ ಬೆಂಬಲಿಸಬೇಕು ಅನ್ನೋ ನಿರ್ಧಾರ ತೆಗೆದುಕೊಳ್ಳುವ ವಿಚಾರಗಳಿದ್ದವು ಎಂದು ಹೇಳಲಾಗುತ್ತದೆ. ಈ ಟೂಲ್​ಕಿಟ್​ ನವೆಂಬರ್​ನಿಂದ ರೈತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಮಾಹಿತಿಯನ್ನ ಹೊಂದಿದೆ.

ಇದು ಕೇವಲ ಒಂದು ದೇಶದ ಜನರಿಗೆ ಮಾತ್ರ ಸೀಮಿತವಾಗಿ ಇರೋದಿಲ್ಲ. ಇದು ವಿಶ್ವದಾದ್ಯಂತ ಜನರಿಗೆ ಮಾಹಿತಿ ನೀಡಲು ಮಾಹಿತಿಯನ್ನ ನೀಡುತ್ತದೆ.

ಪೊಲೀಸರು ಹಾಗೂ ಸರ್ಕಾರ ಟೂಲ್ ​ಕಿಟ್​ನ್ನು ಭಾರತದ ವಿರುದ್ಧದ ಪಿತೂರಿಯ ಭಾಗವೆಂದು ವ್ಯಾಖ್ಯಾನಿಸಿದೆ. ಸಾರ್ವಜನಿಕ ಜಾಗೃತಿಯನ್ನ ಮೂಡಿಸುವ ಯಾವುದೇ ಚಳವಳಿಗಳಲ್ಲಿ ಟೂಲ್ ​ಕಿಟ್​ ನ್ನು ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಇದು ದುರುಪಯೋಗಕ್ಕೂ ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...