ಗ್ರೇಟಾ ಥನ್ಬರ್ಗ್ರ ಟೂಲ್ ಕಿಟ್ ಪ್ರಕರಣದಲ್ಲಿ ಲಿಂಕ್ ಹೊಂದಿರುವ ಮತ್ತೊಬ್ಬ ಪರಿಸರ ಕಾರ್ಯಕರ್ತೆ 22 ವರ್ಷದ ದಿಶಾ ರವಿಯನ್ನ ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ದಿಶಾ ರವಿಯನ್ನ 5 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಬೆಂಗಳೂರು ಮೂಲದ ದಿಶಾ ರವಿಯನ್ನ ದೆಹಲಿ ಸೈಬರ್ ಕ್ರೈಂ ಪೊಲೀಸರ ತಂಡ ಬೆಂಗಳೂರಿನಲ್ಲಿ ಬಂಧಿಸಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಅನ್ನೋದ್ರ ಬಗ್ಗೆ ಟೂಲ್ ಕಿಟ್ ತಯಾರಿಸಿದ ಆರೋಪದ ಅಡಿಯಲ್ಲಿ ದಿಶಾರನ್ನ ಬಂಧಿಸಲಾಗಿದೆ.
ಅಲ್ಲದೇ ಬಂಧಿತ ದಿಶಾ ರವಿ ಪ್ರೋ ಖಲಿಸ್ತಾನಿ ಗುಂಪಿನ ಜೊತೆಯೂ ಗುರುತಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ದಿಶಾ ರವಿ ಬಂಧನದ ಬಳಿಕ ಟೂಲ್ ಕಿಟ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ.
ಟೂಲ್ ಕಿಟ್ ಅಂದರೆ ಒಂದು ವಿಷಯದ ಬಗ್ಗೆ ಜಾಗೃತಿ ಮೂಡಿಸಲು ರಚಿಸಲಾಗುವ ಒಂದು ಮಾರ್ಗಸೂಚಿಯಾಗಿದೆ. ಗ್ರೇಟಾ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್ ಕಿಟ್ನಲ್ಲಿ ಭಾರತದಲ್ಲಿ ನಡೆಯುತ್ತಿರೋ ರೈತ ಪ್ರತಿಭಟನೆ ಬಗ್ಗೆ ಏನೂ ಮಾಹಿತಿ ಇಲ್ಲದವರು ಪರಿಸ್ಥಿತಿಯನ್ನ ಅರಿತುಕೊಂಡು ತಮ್ಮದೇ ಆದ ವಿಶ್ಲೇಷಣೆಯ ಆಧಾರದ ಮೇಲೆ ರೈತರನ್ನ ಹೇಗೆ ಬೆಂಬಲಿಸಬೇಕು ಅನ್ನೋ ನಿರ್ಧಾರ ತೆಗೆದುಕೊಳ್ಳುವ ವಿಚಾರಗಳಿದ್ದವು ಎಂದು ಹೇಳಲಾಗುತ್ತದೆ. ಈ ಟೂಲ್ಕಿಟ್ ನವೆಂಬರ್ನಿಂದ ರೈತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಮಾಹಿತಿಯನ್ನ ಹೊಂದಿದೆ.
ಇದು ಕೇವಲ ಒಂದು ದೇಶದ ಜನರಿಗೆ ಮಾತ್ರ ಸೀಮಿತವಾಗಿ ಇರೋದಿಲ್ಲ. ಇದು ವಿಶ್ವದಾದ್ಯಂತ ಜನರಿಗೆ ಮಾಹಿತಿ ನೀಡಲು ಮಾಹಿತಿಯನ್ನ ನೀಡುತ್ತದೆ.
ಪೊಲೀಸರು ಹಾಗೂ ಸರ್ಕಾರ ಟೂಲ್ ಕಿಟ್ನ್ನು ಭಾರತದ ವಿರುದ್ಧದ ಪಿತೂರಿಯ ಭಾಗವೆಂದು ವ್ಯಾಖ್ಯಾನಿಸಿದೆ. ಸಾರ್ವಜನಿಕ ಜಾಗೃತಿಯನ್ನ ಮೂಡಿಸುವ ಯಾವುದೇ ಚಳವಳಿಗಳಲ್ಲಿ ಟೂಲ್ ಕಿಟ್ ನ್ನು ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಇದು ದುರುಪಯೋಗಕ್ಕೂ ಕಾರಣವಾಗುತ್ತದೆ.