alex Certify ತಾಯಿ ಪ್ರೀತಿಗಿಂತ ಮಿಗಿಲಾದ್ದು ಬೇರೆ ಇಲ್ಲ ಎಂಬುದನ್ನು ತೋರಿಸುತ್ತೆ ಈ ‌ʼಪೋಸ್ಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಪ್ರೀತಿಗಿಂತ ಮಿಗಿಲಾದ್ದು ಬೇರೆ ಇಲ್ಲ ಎಂಬುದನ್ನು ತೋರಿಸುತ್ತೆ ಈ ‌ʼಪೋಸ್ಟ್ʼ

ತಾಯಿ ಪ್ರೀತಿಗೆ ಸರಿ ಸಮನಾದದ್ದು ಯಾವುದೂ ಇಲ್ಲ ಎಂದು ಹೇಳ್ತಾರೆ. ತಾಯಿ ತೋರುವ ಕಾಳಜಿ ಹಾಗೂ ಮಮತೆ ಮತ್ತೆಲ್ಲೂ ಸಿಗೋದಿಲ್ಲ . ಇದೇ ಮಾತಿಗೆ ಸಾಕ್ಷಿ ಎಂಬಂತೆ ಟ್ವಿಟರ್​ನಲ್ಲಿ ಫೋಟೋ ಒಂದು ಸಖತ್​ ವೈರಲ್​ ಆಗಿದೆ.

ಅಮೀರ್ ಖಾನ್​ ಎಂಬ ಹೆಸರಿನ ಎನ್ಹೆಚ್​ಎಸ್​ ಆಸ್ಪತ್ರೆ ವೈದ್ಯ ತಮ್ಮ ತಾಯಿ ಕಳುಹಿಸಿದ ಮೆಸೇಜ್​ನ ಸ್ಕ್ರೀನ್​ಶಾಟ್​​ ಶೇರ್ ಮಾಡುವ ಮೂಲಕ ತಾಯಿಯ ಕಾಳಜಿ ಏನೆಂದು ತೋರಿಸಿದ್ದಾರೆ.

ಡಾ.ಅಮೀರ್​ ಖಾನ್​ ಶೇರ್​ ಮಾಡಿರುವ ಮೆಸೇಜ್​ನಲ್ಲಿ , ಅಮೀರ್​ ನಿಮ್ಮ ತಾಯಿ ಹೇಳುತ್ತಿದ್ದಾರೆ. ನೀವು ಹೊರಗಡೆ ಹೋಗಬೇಕಾದ ಸಂದರ್ಭದ ಬಂದಾಗ ಕೋಟ್​ ಧರಿಸಬೇಕಂತೆ. ಯಾಕೆಂದರೆ ಹೊರಗಡೆ ಮಂಜು ಇದೆ ಎಂದು ಬರೆಯಲಾಗಿದೆ.

ಈ ಫೋಟೋ ಶೇರ್ ಮಾಡಿರುವ ವೈದ್ಯ, ನನ್ನ ತಾಯಿ ನನಗೆ ಹಲವು ಬಾರಿ ಕರೆ ಮಾಡಿದ್ದರು. ಆದರೆ ನಾನು ಸರ್ಜರಿಯಲ್ಲಿ ಬ್ಯುಸಿ ಇದ್ದಿದ್ದರಿಂದ ಕಾಲ್​ ರಿಸೀವ್​ ಮಾಡೋಕೆ ಆಗಲಿಲ್ಲ. ಇದಾದ ಬಳಿಕ ರಿಸೆಪ್ಶನಿಸ್ಟ್ ಕಡೆಯಿಂದ ನನಗೆ ಈ ಮೆಸೇಜ್​ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಟ್ವಿಟರ್​ನಲ್ಲಿ ಸಖತ್​ ವೈರಲ್​ ಆಗಿದೆ. ಅನೇಕರು ಈ ಮೆಸೇಜ್​ನ್ನು ಕೊಂಡಾಡಿದ್ರೆ ಇನ್ನು ಕೆಲವರು ತಮ್ಮ ತಾಯಿ ತೋರಿದ ಕಾಳಜಿಯ ಕೆಲ ಘಟನೆಗಳನ್ನ ಮೆಲಕು ಹಾಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...