alex Certify ಏರ್​ಪೋರ್ಟ್ ಫುಡ್​ಕೌಂಟರ್​ನಲ್ಲಿ ಕೂತು ಆಹಾರ ಸವಿದ ಕೋತಿ..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್​ಪೋರ್ಟ್ ಫುಡ್​ಕೌಂಟರ್​ನಲ್ಲಿ ಕೂತು ಆಹಾರ ಸವಿದ ಕೋತಿ..! ವಿಡಿಯೋ ವೈರಲ್​

ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಕೋತಿಯೊಂದು ಆಹಾರದ ಸ್ಯಾಂಪಲ್​ಗಳನ್ನ ಸವಿಯುತ್ತಾ ಎಂಜಾಯ್​ ಮಾಡಿದೆ. 2018ರ ಮಾರ್ಚ್​ನಲ್ಲಿ ಚಿತ್ರೀಕರಿಸಿದ ವಿಡಿಯೋ ಇದಾಗಿದ್ದು, ಇದೀಗ ಮತ್ತೊಮ್ಮೆ ವೈರಲ್​ ಆಗಿದೆ. ವಿಡಿಯೋದಲ್ಲಿ ಕೋತಿಯು ಏರ್​ ಇಂಡಿಯಾ ಲಾಂಜ್​ ಒಳಗೆ ಕೌಂಟರ್​ನಲ್ಲಿ ಕೂತು ರುಚಿಕರ ಖಾದ್ಯವನ್ನ ಸವಿಯುತ್ತಿರೋದನ್ನ ನೀವು ಕಾಣಬಹುದಾಗಿದೆ.

ಲಾಂಜ್​ನಲ್ಲಿ ತನ್ನ ವಿಮಾನ ಬರೋದಕ್ಕೆ ಕಾಯುತ್ತಿದ್ದ ಪ್ರಯಾಣಿಕರಾದ ಜೆನ್ನಾ ಕರ್ಟೀಸ್​ ಎಂಬವರು ಈ ವಿಡಿಯೋವನ್ನ ಸೆರೆ ಹಿಡಿದಿದ್ದಾರೆ. 2018ರ ಮಾರ್ಚ್ 5ರಂದು ಜೆನ್ನಾ ಉದ್ಯಮ ಪ್ರವಾಸದ ಹಿನ್ನೆಲೆ ಭಾರತಕ್ಕೆ ಆಗಮಿಸಿದ್ದರು. ಇದೀಗ ಈ ವಿಡಿಯೋ ಮತ್ತೊಮ್ಮೆ ವೈರಲ್​ ಆಗಿದೆ.

ಜೆನ್ನಾ ಫುಡ್ ಕೌಂಟರ್ ಬಳಿ ಇದ್ದ ರೆಫ್ರಿಜರೇಟರ್​ನಿಂದ ನೀರಿನ ಬಾಟಲಿಯನ್ನ ತೆಗೆದುಕೊಂಡು ಹೋಗಲು ಆಗಮಿಸಿದ್ದರು. ನೀರಿನ ಬಾಟಲಿ ತೆಗೆದುಕೊಂಡು ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ ಈ ಕೋತಿ ಆಹಾರ ತಿನ್ನುತ್ತಿರುವ ದೃಶ್ಯ ಜೆನ್ನಾ ಕಣ್ಣಿಗೆ ಬಿದ್ದಿದೆ. ಎಲ್ಲಾ ಆಹಾರವನ್ನ ಸವಿದ ಕೋತಿಗೂ ಕೊನೆಗೆ ಅಲ್ಲಿದ್ದ ಬಾಳೆಹಣ್ಣನ್ನೂ ಸವಿದಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...