alex Certify ಆನೆಮರಿ ನೀರಾಟ ನೋಡಿದ್ರೆ‌ ಬೆರಗಾಗ್ತೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆಮರಿ ನೀರಾಟ ನೋಡಿದ್ರೆ‌ ಬೆರಗಾಗ್ತೀರಾ….!

WATCH: Video of Baby Elephant Splashing in Water Goes Viral. Twitter Showers All its Love

ಪ್ರಾಣಿಗಳು ನೀರು ಕಂಡಕೂಡಲೇ ಸ್ನಾನಕ್ಕಿಳಿಯುತ್ತವೆ. ಅದರಲ್ಲೂ ಆನೆಗಳಿಗೆ ಸ್ನಾನ ಮಾಡುವುದೆಂದರೆ ಎಲ್ಲಿಲ್ಲದ‌ ಖುಷಿ. ಆನೆ ಮರಿಗಳಿಗೆ ನೀರು ಸಿಕ್ಕರೆ ಕೇಳುವುದೇ ಬೇಡ.

ಸಿಮೊನ್ ಬಿ.ಆರ್‌.ಎಫ್.ಸಿ‌. ಹಾಪ್ಕಿನ್ಸ್ ಎಂಬ ಟ್ವಿಟರ್ ಖಾತೆಯಲ್ಲಿ “ಬಾತ್ ಟೈಂ” ಎಂಬ ಕ್ಯಾಪ್ಶನ್ ನೊಂದಿಗೆ ಆನೆ ಮರಿಯೊಂದು ಸ್ನಾನ ಮಾಡುವ ಅದ್ಭುತ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ.

ವಿಡಿಯೋವನ್ನು ಒಂದೇ ದಿನದಲ್ಲಿ 1624 ಜನ ವೀಕ್ಷಿಸಿದ್ದು, 1844 ಜನ ಲೈಕ್ ಮಾಡಿದ್ದಾರೆ. 303 ಜ‌ನ ರಿ ಟ್ವೀಟ್ ಮಾಡಿದ್ದಾರೆ. ಆ ವಿಡಿಯೋ ನೋಡಿ ಖುಷಿ ಪಡದ ಜನರೇ ಇಲ್ಲ‌. ಏಕೆಂದರೆ, ಆನೆ ಮರಿಯ ಮುದ್ದಾದ ನೀರಾಟ ಅತಿ ಅಪರೂಪದ ಸನ್ನಿವೇಶವಾಗಿದೆ.

ಮಾವುತ ಆನೆ ಹಾಗೂ ಅದರ ಮರಿಯನ್ನು ಸ್ನಾನ ಮಾಡಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಆತ ಪೈಪ್ ಮೂಲಕ ನೀರನ್ನು ಮರಿಗೆ ಹಾರಿಸುತ್ತಾನೆ. ಆದರೆ, ಮರಿ ಆತನಿಂದ ತಪ್ಪಿಸಿಕೊಂಡು ಟಬ್ ನೊಳಗೆ ಇಳಿಯುತ್ತದೆ. ನೀರು ತುಂಬಿದ ಟಬ್ ನಲ್ಲಿ ಮುಳುಗಿ ಕಾಲೆಲ್ಲ ಮೇಲೆ ಮಾಡಿ ಹೊರಳಾಡುತ್ತದೆ. ಈ ದೃಶ್ಯ ನೋಡುಗರ ಮನ ತಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...