alex Certify ಮತ್ತೆ ಸದ್ದು ಮಾಡಿದ್ದಾನೆ ’ಹೇರ್ ‌ಕಟ್‌’ ಪೋರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಸದ್ದು ಮಾಡಿದ್ದಾನೆ ’ಹೇರ್ ‌ಕಟ್‌’ ಪೋರ

ಹೇರ್‌ಕಟ್ ಮಾಡಿಸಿಕೊಳ್ಳುವುದು ಎಂದರೆ ಬಹುತೇಕ ಮಕ್ಕಳಿಗೆ ಬಲೇ ಕಿರಿಕಿರಿ. ಅನುಶ್ರುತ್‌ ಹೆಸರಿನ ಬಾಲಕನೊಬ್ಬ ತನಗೆ ಹೇರ್‌ಕಟ್ ಮಾಡುತ್ತಿರುವ ಕ್ಷೌರಿಕನಿಗೆ ಬಯ್ಯುತ್ತಾ, “ಅರ‍್ರೇ! ಹೇರ್‌ಕಟ್ ಮಾಡಬೇಡ” ಎನ್ನುತ್ತಿರುವ ವಿಡಿಯೋವೊಂದು ಸಖತ್‌ ವೈರಲ್ ಆಗಿತ್ತು.

ಈ ಪೋರನ ಮುದ್ದದ ಆವಾಜ್‌ಗೆ ಸಾಕಷ್ಟು ಸ್ಪೂಫ್ ಹಾಗೂ ಮೆಮೆಗಳನ್ನು ಮಾಡಿ ಬೇರೆ ಬೇರೆ ನಿದರ್ಶನಗಳನ್ನು ವಿನೋದಮಯವಾಗಿ ಬಿತ್ತರಿಸಲಾಗಿತ್ತು.

ಇದೀಗ ಪೋರನ ವಿಡಿಯೋ ಮತ್ತೊಮ್ಮೆ ಕಾಣಿಸಿಕೊಂಡಿದೆ. ಡಬ್ಲ್ಯೂಡಬ್ಲ್ಯೂಇನ ಹಳೆಯ ಮ್ಯಾಚ್‌ ಒಂದಕ್ಕೆ ಅನುಶ್ರುತ್‌ನ ವಿಡಿಯೋದಲ್ಲಿರುವ ಆಡಿಯೋವನ್ನು ಮಾರ್ಫ್ ಮಾಡಲಾಗಿದೆ. ಯೂಟ್ಯೂಬರ್‌ ಹಾಗೂ ಇನ್‌ಸ್ಟಾಗ್ರಾಮರ್‌ ಜೇ ರಾಯ್‌ ಈ ವರ್ಶನ್‌ ಕ್ರಿಯೇಟ್ ಮಾಡಿದ್ದಾರೆ.

ರೆಸಲ್‌ಮೇನಿಯಾದ ಈ ವಿಡಿಯೋದಲ್ಲಿ ಡೊನಾಲ್ಡ್ ಟ್ರಂಪ್ ಸಹ ಕಾಣಿಸಿಕೊಂಡಿದ್ದು, ಜೊತೆಯಲ್ಲಿ ವಿನ್ಸ್ ಮ್ಯಾಕ್‌ಮಹೋನ್‌ರನ್ನೂ ಸಹ ಕಾಣಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...