alex Certify ಲೇವಡಿ ಮಾಡಿದ ಅಧಿಕಾರಿಗೆ ಚಪ್ಪಲಿಯಲ್ಲಿ ಬಾರಿಸಿದ ಬಿಜೆಪಿ ನಾಯಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೇವಡಿ ಮಾಡಿದ ಅಧಿಕಾರಿಗೆ ಚಪ್ಪಲಿಯಲ್ಲಿ ಬಾರಿಸಿದ ಬಿಜೆಪಿ ನಾಯಕಿ

ಸಾರ್ವಜನಿಕರ ಎದುರಲ್ಲೇ ಲೇವಡಿ ಮಾಡಿದ ಸರ್ಕಾರಿ ಅಧಿಕಾರಿಗೆ ಬಿಜೆಪಿ ನಾಯಕಿ ಚಪ್ಪಲಿಯಲ್ಲಿ ಬಾರಿಸಿದ್ದಾರೆ. ಈ ಘಟನೆ ಹರ್ಯಾಣದ ಹಿಸಾರ್ ನ ಬಲ್ಸಮಂದ್ ಮಂಡಿಯಲ್ಲಿ ನಡೆದಿದ್ದು, ಈಗ ಪೊಲೀಸ್ ಠಾಣೆಯಲ್ಲಿ ಪರ – ವಿರುದ್ಧ ದೂರು ದಾಖಲಾಗಿದೆ.

ಟಿಕ್ ಟಾಕ್ ಸ್ಟಾರ್ ಹಾಗೂ ಬಿಜೆಪಿ ನಾಯಕಿಯಾಗಿರುವ ಸೋನಾಲಿ ಪೋಗಟ್ ಕೆಲ ರೈತರ ದೂರಿನ ಮೇರೆಗೆ ಶುಕ್ರವಾರದಂದು ಮಂಡಿಯ ಪರಿಶೀಲನೆಗೆ ತೆರಳಿದ್ದ ವೇಳೆ, ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸುಲ್ತಾನ್ ಸಿಂಗ್, ನೋಡಲು ನೀವು ತುಂಬಾ ಸುಂದರವಾಗಿದ್ದೀರಿ. ನಿಮ್ಮಂತ ಸುಂದರಿಯರು ಇಷ್ಟೊತ್ತಿನಲ್ಲಿ ಮಂಡಿಗೆ ಬರಬಾರದು ಎಂದು ಹೇಳಿದ್ದ.

ಇದರಿಂದ ಆಕ್ರೋಶಗೊಂಡಿದ್ದ ಸೋನಾಲಿ ಮಾರುಕಟ್ಟೆ ಪರಿಶೀಲನೆ ಬಳಿಕ ನೆರಳಲ್ಲಿ ಕುಳಿತಿದ್ದ ಸುಲ್ತಾನ್ ಸಿಂಗ್ ಗೆ ಚಪ್ಪಲಿಯಲ್ಲಿ ಬಾರಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ತಮಗೆ ಸುಲ್ತಾನ್ ಸಿಂಗ್ ಅವಮಾನಿಸಿರುವುದಾಗಿ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುಲ್ತಾನ್ ಸಿಂಗ್ ಕೂಡ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...