alex Certify ಚಮಚದಲ್ಲಿ ನೀರು ಕುಡಿಯುತ್ತಿರುವ ಹಾವು; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಮಚದಲ್ಲಿ ನೀರು ಕುಡಿಯುತ್ತಿರುವ ಹಾವು; ವಿಡಿಯೋ ವೈರಲ್

WATCH: Snake Sipping Water off a Spoon in Rare Video Leaves ...

ಪ್ರಪಂಚದ ಮೇಲಿರುವ‌ ಎಲ್ಲ ಜೀವಿಗಳಿಗಿಂತ ಅತಿ‌ ಬುದ್ಧಿವಂತ ಜೀವಿ ಎಂದು ಮನುಷ್ಯರು ಅಂದುಕೊಂಡಿದ್ದರೂ, ಪ್ರಕೃತಿಯ ಹಲವು‌ ವಿಸ್ಮಯಗಳು ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತವೆ.

ಅದರಲ್ಲೂ ಹಾವಿನ ವಿಷಯದಲ್ಲಿ‌‌ ಚಿಕ್ಕ‌ ಚಿಕ್ಕ ವಿಷಯದಲ್ಲೂ‌ ಮನುಷ್ಯರು ಬೆರಗುಗಣ್ಣುಗಳಿಂದ ನೋಡುವುದು‌ ಸಹಜ. ಇನ್ನು ‌ಹಾವೊಂದು ಚಮಚದಲ್ಲಿರುವ ನೀರನ್ನು ಕುಡಿಯುವ ದೃಶ್ಯ ನೋಡಿದರೆ, ಅಚ್ಚರಿಯಾಗುವುದಿಲ್ಲವೇ…?

ಹೌದು, ಸಾಮಾಜಿಕ‌ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಹಾವೊಂದು ಚಮಚದಲ್ಲಿರುವ‌ ನೀರನ್ನು ಖಾಲಿ ಮಾಡುತ್ತಿರುವ ವಿಡಿಯೋ ಹಾಕಿದ್ದು, ಇದೀಗ ಇದು ವೈರಲ್ ಆಗಿದೆ. ವ್ಯಕ್ತಿಯ ಪ್ರಕಾರ, ಇದೊಂದು ಹೆಚ್ಚು ‌ವಿಷ‌ ಹೊಂದಿರದ ಹಾವಾಗಿದೆ.

ಈ ರೀತಿ ವಿಡಿಯೋ ಹಾಕುತ್ತಿದ್ದಂತೆ‌ ಆರಂಭದಲ್ಲಿ ನೆಟ್ಟಿಗರು ಅಚ್ಚರಿಯಿಂದ ನೂರಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಈಗಾಗಲೇ 9 ಸಾವಿರಕ್ಕೂ ಅಧಿಕ ಮಂದಿ‌ ಈ ವಿಡಿಯೋ ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...