alex Certify ಬಾತುಕೋಳಿಗೆ ಗೂಡು ನಿರ್ಮಿಸಲು ನೆರವಾದ ಪುಟಾಣಿ ಪೋರ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾತುಕೋಳಿಗೆ ಗೂಡು ನಿರ್ಮಿಸಲು ನೆರವಾದ ಪುಟಾಣಿ ಪೋರ: ವಿಡಿಯೋ ವೈರಲ್

ನದಿಯಲ್ಲಿ ಗೂಡನ್ನ ಕಟ್ಟುತ್ತಿದ್ದ ಬಾತುಕೋಳಿಗಳಿಗೆ ಪುಟ್ಟ ಬಾಲಕನೊಬ್ಬ ನೆರವಾಗಿದ್ದು ಪಕ್ಷಿಗಳ ಮೇಲೆ ಬಾಲಕನಿಗಿರುದ ಪ್ರೀತಿ ಹಾಗೂ ದಯೆಯನ್ನ ಪ್ರದರ್ಶಿಸುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

33 ಸೆಕೆಂಡ್​ಗಳ ವಿಡಿಯೋವನ್ನ ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಸಂತಾ ನಂದಾ ಅವರು ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋಗೆ ಸುಸಂತಾ ಎಲ್ಲರಿಗೂ ತಮ್ಮ ಗೂಡನ್ನ ಕಟ್ಟೋಕೆ ಸಹಾಯ ಮಾಡಿ ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ.

ವಿಡಿಯೋ ತುಣುಕಿನಲ್ಲಿ ಕೊಳದಲ್ಲಿ ಗೂಡನ್ನ ಕಟ್ಟುವಲ್ಲಿ ನಿರತರಾಗಿದ್ದ 2 ಬಾತುಕೋಳಿಗಳಿಗೆ ಪುಟ್ಟ ಬಾಲಕ ನೆರವಾಗಿರೋದನ್ನ ಕಾಣಬಹುದಾಗಿದೆ. ಕೊಳದ ದಡದಲ್ಲಿ ಕುಳಿತ ಬಾತುಕೋಳಿಗಳಲ್ಲಿ ಒಂದಕ್ಕೆ ಹುಡುಗ ಪುಟ್ಟ ಪುಟ್ಟ ಕೋಲನ್ನ ನೀಡುತ್ತಿದ್ದಾನೆ. ಅದನ್ನ ಕಚ್ಚಿಕ್ಕೊಂಡು ಹೋದ ಬಾತುಕೋಳಿ ಗೂಡು ಕಟ್ಟುತ್ತಿದ್ದ ಇನ್ನೊಂದು ಬಾತುಕೋಳಿ ಬಳಿ ಅದನ್ನ ತೆಗೆದುಕೊಂಡು ಹೋಗಿ ರಾಶಿ ಹಾಕುತ್ತಿದೆ.

— Susanta Nanda IFS (@susantananda3) December 11, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...