alex Certify ತನ್ನ ನೆಚ್ಚಿನ ಗಾಯಕಿಗಾಗಿ ಅಭಿಮಾನಿ ಮಾಡಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ನೆಚ್ಚಿನ ಗಾಯಕಿಗಾಗಿ ಅಭಿಮಾನಿ ಮಾಡಿದ್ದೇನು…?

ಕೇರಳದ ಹರಿಪ್ರಸಾದ್​ ಸಿಎಂ ಎಂಬ ಕಲಾವಿದ 600 ರೂಬಿಕ್​ ಕ್ಯೂಬ್​ಗಳನ್ನ ಬಳಸಿ ಗಾಯಕಿ ಮೈಥಿಲಿ ಠಾಕೂರ್​ ಅವರ ಚಿತ್ರವನ್ನ ಬಿಡಿಸಿದ್ದಾರೆ. ಈ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ .

ಸರಿಗಮಪ ಚಾಂಪ್ಸ್​ನಲ್ಲಿ ಖ್ಯಾತಿ ಗಳಿಸಿದ ಮೈಥಿಲಿ ನನ್ನ ನೆಚ್ಚಿನ ಸಂಗೀತಗಾರರಲ್ಲಿ ಒಬ್ಬರು. ಈಕೆ ಖ್ಯಾತಿಯ ಹಿಂದೆ ಓಡಿದವರಲ್ಲ, ಶುದ್ಧ ಸಂಗೀತವನ್ನ ರಚಿಸುವ ಕಲಾವಿದೆ. ನಮ್ಮ ದೇಶದ ಸಂಸ್ಕೃತಿಯನ್ನ ಪ್ರದರ್ಶಿಸುವವರು. ಈ ಮೂಲಕ ಅನೇಕ ಸಂಗೀತಗಾರರಿಗೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಹರಿಪ್ರಸಾದ್​​ ವಿಡಿಯೋದ ಜೊತೆ ಬರೆದುಕೊಂಡಿದ್ದಾರೆ.

ವಿಡಿಯೋ ಶೇರ್​ ಮಾಡಿದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ಲೈಕ್ಸ್ ಹಾಗೂ ವೀವ್ಸ್​​ಗಳನ್ನ ಪಡೆದುಕೊಂಡಿದೆ. ಹರಿಪ್ರಸಾದ್​ರ ಟ್ಯಾಲೆಂಟ್​ನ್ನ ನೆಟ್ಟಿಗರು ಕೊಂಡಾಡಿದ್ದಾರೆ. ಇತ್ತ ಮೈಥಿಲಿ ಕೂಡ ತಮ್ಮ ಇನ್ಸ್ಟಾ ಅಕೌಂಟ್​ನಲ್ಲಿ ವಿಡಿಯೋ ಶೇರ್​ ಮಾಡಿ ಕಲಾವಿದನಿಗೆ ಧನ್ಯವಾದ ಅರ್ಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...