alex Certify ಆಸ್ಪತ್ರೆಯಲ್ಲೇ ದೀಪಾವಳಿ ಆಚರಿಸಿದ ಕೊರೊನಾ ಸೋಂಕಿತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲೇ ದೀಪಾವಳಿ ಆಚರಿಸಿದ ಕೊರೊನಾ ಸೋಂಕಿತರು

ಕೋವಿಡ್-19 ಸಂದರ್ಭದಲ್ಲೂ ಸಹ ಈ ಬಾರಿಯ ದೀಪಾವಳಿಯನ್ನು ದೇಶವಾಸಿಗಳು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಗುಜರಾತ್‌ನ ಕೋವಿಡ್-19 ಸೋಂಕಿತ ರೋಗಿಗಳು ದೀಪಾವಳಿ ಆಚರಿಸುತ್ತಿರುವ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ.

ವಡೋದರಾದ ಸರ್‌ ಸಯ್ಯಾಜಿ ರಾವ್‌ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಧರಿಸಿದ ವೈದ್ಯರು ಹಾಗೂ ನರ್ಸ್‌ಗಳೊಂದಿಗೆ ಸೋಂಕಿತರು ಭಜನೆಗಳನ್ನು ಹೇಳಿಕೊಂಡು, ಕೈಗಳಲ್ಲಿ ದೀಪಗಳನ್ನು ಹಿಡಿದು ವಾರ್ಡ್‌ನಲ್ಲಿ ಜಮಾಯಿಸಿ ಹಬ್ಬವನ್ನು ಆಚರಿಸಿದ್ದಾರೆ.

ಕತ್ತಲೆಯ ಕೋಣೆಯಲ್ಲಿ ದೀಪಗಳನ್ನು ಹಚ್ಚುವ ಮೂಲಕ ಅಂಧಕಾರದಿಂದ ಬೆಳಕಿನೆಡೆಗೆ ದೇವರು ನಮ್ಮನ್ನು ಕರೆದುಕೊಂಡು ಹೋಗಲಿ ಎಂದು ಸೋಂಕಿತರು ದೇವರಲ್ಲಿ ಬೇಡಿಕೊಂಡಿರುವ ಈ ಸಂಭ್ರಮಾಚರಣೆಯ ವಿಡಿಯೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...