alex Certify 85ನೇ ವಯಸ್ಸಿನಲ್ಲೂ ಸಮರಕಲೆ ಮೂಲಕ ಜನಮನ ಗೆದ್ದ ’ಆಜ್ಜಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

85ನೇ ವಯಸ್ಸಿನಲ್ಲೂ ಸಮರಕಲೆ ಮೂಲಕ ಜನಮನ ಗೆದ್ದ ’ಆಜ್ಜಿ’

ತಮ್ಮ ಸಮರಕಲೆಯನ್ನು ಪ್ರದರ್ಶಿಸುವ ಮೂಲಕ ಹೊಟ್ಟೆಪಾಡಿಗೆ ನಾಲ್ಕು ಕಾಸು ಸಂಪಾದನೆ ಮಾಡಲು ಬಿಸಿಲಿನಲ್ಲಿ ದಣಿಯುತ್ತಿದ್ದ 85 ವರ್ಷದ ವೃದ್ಧೆಯೊಬ್ಬರ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮುಖಕ್ಕೆ ಮಾಸ್ಕ್ ಧರಿಸಿಕೊಂಡು, ಸೀರೆಯುಟ್ಟುಕೊಂಡೇ ಎರಡೂ ಕೈಗಳಲ್ಲಿ ಕೋಲುಗಳನ್ನು ಹಿಡಿದುಕೊಂಡು ಪಕ್ಕಾ ವೃತ್ತಿಪರರಂತೆ ಸ್ಟಂಟ್‌ಗಳನ್ನು ಮಾಡುತ್ತಿರುವ ಈ ಹಿರಿಯ ಜೀವಕ್ಕೆ ‘Warrior Aaji’ ಎಂದು ನೆಟ್ಟಿಗರು ಪ್ರೀತಿಯಿಂದ ಹೆಸರಿಟ್ಟಿದ್ದಾರೆ. ಸಜ್ಜನರ ಮನವನ್ನು ಹಿಂಡುವ ದೃಶ್ಯವೊಂದರಲ್ಲಿ, ತಮ್ಮ ಹೊಟ್ಟೆಪಾಡಿಗಾಗಿ ಆ ಬ್ಯಾಗ್‌ನಲ್ಲಿ ಸ್ವಲ್ಪ ದುಡ್ಡನ್ನು ಹಾಕಲು ಬೇಡಿಕೊಳ್ಳುತ್ತಾರೆ ಈ ಆಜ್ಜಿ.

ಶಾಂತಾಬಾಯಿ ಪವಾರ್‌ ಹೆಸರಿನ ಇವರು, “ನನಗೆ 8 ವರ್ಷ ವಯಸ್ಸಿದ್ದಾಗಲೇ ನನ್ನ ತಂದೆ ಕಷ್ಟಪಟ್ಟು ಬದುಕಲು ಕಲಿಸಿಕೊಟ್ಟರು. ಕೊರೋನಾ ಸಮಯದಲ್ಲಿ ಜನರು ಸಾಮಾನ್ಯವಾಗಿ ಮನೆಗಳಲ್ಲೇ ಉಳಿದುಕೊಳ್ಳುತ್ತಾರೆ. ಹಾಗಾಗಿ, ನಾನು ನನ್ನ ಪಾತ್ರೆಗಳನ್ನು ಬಡಿಯುವ ಮೂಲಕ, ನನ್ನ ಪ್ರದರ್ಶನವನ್ನು ಕಂಡು ಏನಾದರೂ ಕೊಡಲು ಕೋರುತ್ತೇನೆ” ಎಂದಿದ್ದಾರೆ.

ನಿರೀಕ್ಷೆಯಂತೆಯೇ ಆಜ್ಜಿಯ ವಿಡಿಯೋಗೆ ಸ್ಪಂದಿಸಿದ ಬಾಲಿವುಡ್ ನಟ ಸೋನು ಸೂದ್, “ನನಗೆ ಇವರ ವಿವರಗಳನ್ನು ತಿಳಿಯಲು ಸಹಾಯ ಮಾಡುವಿರಾ? ನಾನು ಅವರಿಗಾಗಿ ಒಂದು ಸಣ್ಣ ತರಬೇತಿ ಶಾಲೆಯೊಂದನ್ನು ತೆರೆದು, ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಗಾಗಿ ಫೈಟ್ ಮಾಡುವುದನ್ನು ಕಲಿಸಲು ಇಚ್ಛಿಸುತ್ತೇನೆ” ಎಂದಿದ್ದಾರೆ. ಇದೇ ರೀತಿ ರಿತೇಶ್ ದೇಶ್‌ಮುಖ್‌ ಸಹ ಆಜ್ಜಿಯ ಸಂಪರ್ಕದ ವಿವರಗಳನ್ನು ಕೋರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...