alex Certify BIG NEWS: ಶಿರಡಿ ಸಾಯಿಬಾಬಾ ಮಂದಿರಕ್ಕೆ ತೆರಳುವ ಭಕ್ತರಿಗೆ ಇನ್ಮುಂದೆ ಡ್ರೆಸ್ ಕೋಡ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಿರಡಿ ಸಾಯಿಬಾಬಾ ಮಂದಿರಕ್ಕೆ ತೆರಳುವ ಭಕ್ತರಿಗೆ ಇನ್ಮುಂದೆ ಡ್ರೆಸ್ ಕೋಡ್…!

ಮಹಾರಾಷ್ಟ್ರದ ಶಿರಡಿಯಲ್ಲಿರುವ ಪ್ರಸಿದ್ಧ ಸಾಯಿಬಾಬಾ ಮಂದಿರಕ್ಕೆ ತೆರಳುವ ಭಕ್ತರಿಗೆ ಶ್ರೀ ಸಾಯಿಬಾಬಾ ಟ್ರಸ್ಟ್ ಡ್ರೆಸ್​ಕೋಡ್​ ಬಗ್ಗೆ ಮಾಹಿತಿ ನೀಡಿದೆ. ಭಾರತೀಯ ಸಂಸ್ಕೃತಿಯನ್ನ ಪ್ರತಿನಿಧಿಸುವ ಧಿರಿಸುಗಳನ್ನ ಹಾಕಿಕೊಂಡು ದೇಗುಲಕ್ಕೆ ಬರುವಂತೆ ಭಕ್ತರಿಗೆ ಹೇಳಿದೆ.

ದೇಶದ ಅನೇಕ ಪ್ರಸಿದ್ಧ ದೇಗುಲಗಳಿಗೆ ತೆರಳುವ ಭಕ್ತರಿಗೆ ಡ್ರೆಸ್​ ಕೋಡ್​ ನಿಗದಿ ಮಾಡಲಾಗಿದೆ. ಆದರೆ ಶಿರಡಿಗೆ ಆಗಮಿಸುವ ಭಕ್ತರಿಗೆ ಡ್ರೆಸ್​ಕೋಡ್​ ಮನವಿಯೇ ಹೊರತು ಆದೇಶವಲ್ಲ ಅಂತಾ ಶ್ರೀ ಸಾಯಿಬಾಬಾ ಟ್ರಸ್ಟ್​ನ ಕಾರ್ಯನಿರ್ವಾಹಕ ಅಧಿಕಾರಿ ಕನ್ಹುರಾಜ್​​ ಬಾಗಟೆ ಸ್ಪಷ್ಟನೆ ನೀಡಿದ್ದಾರೆ.

ಅಹ್ಮದನಗರ ಜಿಲ್ಲೆಯ ಶಿರಡಿಯಲ್ಲಿರುವ ಪ್ರಸಿದ್ಧ ದೇಗುಲಕ್ಕೆ ಅನೇಕರು ಆಕ್ಷೇಪಾರ್ಹ ಡ್ರೆಸ್​ಗಳನ್ನ ಹಾಕಿ ಬರುತ್ತಾರೆ ಎಂಬ ದೂರು ಕೇಳಿಬಂದ ಹಿನ್ನೆಲೆ ಈ ಮನವಿ ಮಾಡಿದ್ದೇವೆ ಅಂತಾ ಅವರು ಹೇಳಿದ್ರು.

ನೀವು ಧಾರ್ಮಿಕ ಸ್ಥಳಕ್ಕೆ ಪ್ರವೇಶಿಸುತ್ತಿರುವುದರಿಂದ ಸಾಯಿ ಬಾಬಾ ಭಕ್ತರಾದ ನೀವು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಉಡುಗೆಗಳನ್ನ ತೊಡಬೇಕೆಂದು ಕೋರಲಾಗಿದೆ ಎಂಬ ಪೋಸ್ಟರ್​ಗಳನ್ನ ಮರಾಠಿ ಹಾಗೂ ಇಂಗ್ಲೀಷ್​ ಭಾಷೆಗಳಲ್ಲಿ ಬರೆದು ಅಳವಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...