alex Certify ಅಬ್ಬಾ…! ಈ ಕ್ರಿಯೇಟಿವಿಟಿಗೆ ಹೇಳಲೇಬೇಕು ‌ʼಹ್ಯಾಟ್ಸಾಫ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ…! ಈ ಕ್ರಿಯೇಟಿವಿಟಿಗೆ ಹೇಳಲೇಬೇಕು ‌ʼಹ್ಯಾಟ್ಸಾಫ್ʼ

ಮಧ್ಯಪ್ರದೇಶದಲ್ಲಿ ಇಬ್ಬರು ಮಕ್ಕಳು ಮರದಲ್ಲಿ ಸಿದ್ಧಪಡಿಸಿದ ಸೀ-ಸಾ ಸ್ವಿಂಗ್ ನಲ್ಲಿ ಆಟವಾಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನತಟ್ಟಿದೆ.

ಐಎಎಸ್ ಅಧಿಕಾರಿ ಶೇರ್ ಸಿಂಗ್ ಮೀನಾ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಾಮೆಂಟ್ ಮಾಡಿ, ಮಕ್ಕಳ ಆಟಕ್ಕೆ ತಯಾರಿಸಿದ ಸಾಧನ, ಸೃಜನಶೀಲತೆ ಹಾಗೂ ಮಕ್ಕಳ ಖುಷಿಯನ್ನು ಹೊಗಳಿದ್ದಾರೆ.

ಸಾಮಾನ್ಯವಾಗಿ ನಗರ ಪ್ರದೇಶದ ಉದ್ಯಾನಗಳಲ್ಲಿ ಕಾಣಸಿಗುವ ಸೀ-ಸಾ ಸ್ವಿಂಗ್ ಮಾದರಿಯಲ್ಲೇ ತಮಗೆ ಲಭ್ಯವಿದ್ದ ಮರವನ್ನು ಬಳಸಿ ತಾತ್ಕಾಲಿಕ ತಿರುಗುವಂತ ಸೀ-ಸಾ ತಯಾರಿಸಿ ಮಕ್ಕಳಿಗೆ ಆಟವಾಡಲು ಅವಕಾಶ ಕಲ್ಪಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮಹಾರಾಷ್ಟ್ರದಲ್ಲಿ ಇದನ್ನು ಗನ್ ಮಕ್ಡಿ ಎಂದೂ ಕರೆಯುತ್ತಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...