alex Certify ಹಿರಿಯ ನಟ ದಿಲೀಪ್ ಕುಮಾರ್ ಸಹೋದರ ಅಸ್ಲಂ ಖಾನ್ ಕೊರೊನಾಗೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಟ ದಿಲೀಪ್ ಕುಮಾರ್ ಸಹೋದರ ಅಸ್ಲಂ ಖಾನ್ ಕೊರೊನಾಗೆ ಬಲಿ

Dilip Kumar's brothers, Ehsaan and Aslam Khan, test positive for ...

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಕುಟುಂಬದಿಂದ ದುಃಖದ ಸುದ್ದಿ ಬಂದಿದೆ. ದಿಲೀಪ್ ಕುಮಾರ್ ಕಿರಿಯ ಸಹೋದರ ಅಸ್ಲಂ ಖಾನ್ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಅವರು ಇಹಲೋಕ ತ್ಯಜಿಸಿದ್ದಾರೆ.

ಅವರು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಿಂದ ಬಳಲುತ್ತಿದ್ದರು. ಕೊರೊನಾ ಪಾಸಿಟಿವ್ ಆಗಿತ್ತು. ಅಸ್ಲಂ ಖಾನ್ ಗೆ ಸುಮಾರು 90 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ಲಂ ಖಾನ್ ಸಹೋದರ ಎಹ್ಸಾನ್ ಖಾನ್ ಗೂ ಕೊರೊನಾ ಕಾಡ್ತಿದೆ. ಅವರ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗ್ತಿದೆ.

ದಿಲೀಪ್ ಕುಮಾರ್ ಗೆ 96 ವರ್ಷವಾಗಿದ್ದು ಪತ್ನಿಯೊಂದಿಗೆ ವಾಸವಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿಲೀಪ್ ಕುಮಾರ್ ಸಕ್ರಿಯವಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...