alex Certify BIG NEWS: ಕೊರೊನಾ ಲಸಿಕೆ ಬರುವ ಮುನ್ನವೇ ಶುರುವಾಯ್ತು ದಂಧೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಲಸಿಕೆ ಬರುವ ಮುನ್ನವೇ ಶುರುವಾಯ್ತು ದಂಧೆ…!

Vaccine Tourism? Travel Company's Covid Package Promises 'VVIP' Indians Chance to Buy Vaccine in US

ಕೊರೊನಾ ವೈರಸ್‌ನಿಂದಾಗಿ ನಾವಿಂದು ಶಾಪಿಂಗ್ ಮಾಡುವುದರಿಂದ ಹಿಡಿದು ಟ್ರಾವೆಲಿಂಗ್ ಮಾಡುವವರೆಗೂ ಸಾಕಷ್ಟು ಬದಲಾವಣೆಗಳು ಆಗಿಬಿಟ್ಟಿವೆ. ತಿಂಗಳುಗಟ್ಟಲೇ ನಿರಂತರ ಪರಿಶ್ರಮದ ಬಳಿಕ ವಿಜ್ಞಾನಿಗಳು ಕೋವಿಡ್-19ಗೆ ಲಸಿಕೆ ಕಂಡು ಹಿಡಿಯುವ ಅಂತಿಮ ಹಂತಕ್ಕೆ ಬಂದಿರುವ ವಿಚಾರ ನಿಟ್ಟುಸಿರು ಬಿಡುವಂತೆ ಮಾಡುತ್ತಿದೆ.

ಇದುವರೆಗೂ ಕೋವಿಡ್-19ಗೆ ಕಂಡುಹಿಡಿದಿರುವ ಲಸಿಕೆಗಳ ಪೈಕಿ ಯಾವೊಂದೂ ಸಹ 100% ಯಶಸ್ವಿಯಾಗದ ಇರುವ ಕಾರಣ ಜನರಲ್ಲಿ ಈ ಬಗ್ಗೆ ಇನ್ನೂ ಆತಂಕ ನಿವಾರಣೆ ಆಗಿಲ್ಲ. ಇದೇ ಆತಂಕವನ್ನು ಲಾಭಕ್ಕೆ ಬಳಸಿಕೊಳ್ಳುತ್ತಿರುವ ವಂಚಕರು ದುಡ್ಡು ಮಾಡಲು ನಾನಾ ಮಾರ್ಗಗಳನ್ನು ಹುಡುಕಿಕೊಂಡಿವೆ.

ಅಮೆರಿಕದ ಮಾರುಕಟ್ಟೆಗೆ ಕೋವಿಡ್-19 ಲಸಿಕೆ ಪರಿಚಯವಾಗುತ್ತಲೇ, ತ್ವರಿತವಾಗಿ ಈ ಲಸಿಕೆ ಹಾಕಿಸಿಕೊಳ್ಳಲು ಮುಂಬಯಿಯಿಂದ ನ್ಯೂಯಾರ್ಕ್‌ಗೆ ಮೂರು ದಿನಗಳು ಹಾಗೂ ನಾಲ್ಕು ರಾತ್ರಿಗಳ ಟೂರ್‌ ಪ್ಯಾಕೇಜ್ ಮಾಡುವುದಾಗಿಯೂ, ಇದಕ್ಕೆ 1,74,999 ರೂಗಳು ಖರ್ಚಾಗುವುದಾಗಿಯೂ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಈ ಸಂದೇಶವನ್ನು ಎಡಲ್ವೀಸ್‌ ಮ್ಯೂಚುವಲ್ ಫಂಡ್ಸ್‌ನ ಸಿಇಓ ರಾಧಿಕಾ ಗುಪ್ತಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...