alex Certify ಅತ್ಯಾಚಾರಿಯ ಪೋಷಕರಿಗೂ ಜೈಲು ಶಿಕ್ಷೆ ವಿಧಿಸಿದೆ ಈ ನ್ಯಾಯಾಲಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರಿಯ ಪೋಷಕರಿಗೂ ಜೈಲು ಶಿಕ್ಷೆ ವಿಧಿಸಿದೆ ಈ ನ್ಯಾಯಾಲಯ..!

5 ವರ್ಷದ ಬಾಲಕಿಯನ್ನ ಅತ್ಯಾಚಾರಗೈದು ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಉತ್ತರಾಖಂಡ್​ನ ಪೋಸ್ಕೋ ಕೋರ್ಟ್ ಪೋಕ್ಸೋ ಕಾಯ್ದೆ ಅಡಿಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮಾತ್ರವಲ್ಲದೇ ಆತನ ಪೋಷಕರಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ. ‘
5 ವರ್ಷದ ಬಾಲಕಿಿ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಫೆಬ್ರವರಿ 2019ರಲ್ಲಿ ಈ ಅಪರಾಧ ನಡೆದಿತ್ತು ಎಂದು ಜಿಲ್ಲಾ ನ್ಯಾಯಾಯಲಯದ ವಿಶೇಷ ಸಹಾಯಕ ಅಧಿಕಾರಿ ವಿಕಾಸ್​ ಗುಪ್ತಾ ಮಾಹಿತಿ ನೀಡಿದ್ರು.
ಯುಎಸ್​ ನಗರದ ರುದ್ರಪುರ ಟ್ರಾನ್ಸಿಟ್​ ಕ್ಯಾಂಪ್​ ಕಾಲೋನಿಯಲ್ಲಿ 2019ರ ಫೆಬ್ರವರಿ 19ರಂಧು ಮಗು ತನ್ನ ಮನೆಯ ಮೇಲ್ಛಾವಣಿಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಈ ಸಂಬಂಧ ಫೆಬ್ರವರಿ 2019ರಂದು ಟ್ರಾನ್ಸಿಟ್​ ಕ್ಯಾಂಪ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಧ್ಯರಾತ್ರಿ ವೇಳೆ ನೆರೆ ಮನೆಯ ಹರ್ಸ್ವರೂಪ್​ ಮೇಲ್ಛಾವಣಿಯಲ್ಲಿರೋದನ್ನ ನೋಡಿದ್ದೇನೆ ಹಾಗೂ ಆತ ವಾಟರ್​ ಟ್ಯಾಂಕ್​ನ ಮುಚ್ಚಳವನ್ನ ತೆಗೆಯುತ್ತಿದ್ದ ಎಂದು ದೂರುದಾರ ಆರೋಪಿದ್ದರು.
ಹರ್ಸ್ವರೂಪ್​​ನನ್ನ ಪೊಲೀಸ್​ ಕಸ್ಟಡಿಗೆ ತೆಗೆದುಕೊಂಡ ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸಿದ್ದಾರೆ. ಮಗುವಿನ ಮೃತ ದೇಹ ಈತನ ಮನೆಯಲ್ಲಿ ಬ್ಯಾಗ್​ ಒಂದರಲ್ಲಿ ಲಭ್ಯವಾಗಿತ್ತು. ಮರಣೋತ್ತರ ವರದಿಯಲ್ಲಿ ಬಾಲಕಿಗೆ ದೌರ್ಜನ್ಯ ನಡೆದಿದೆ ಹಾಗೂ ಕೊಲೆಗೈಯಲಾಗಿದೆ ಎಂದು ತಿಳಿದು ಬಂದಿದೆ.
ಇದಾದ ಬಳಿಕ ಹರ್ಸ್ವರೂಪ್​ ಪೋಷಕರನ್ನೂ ಜೈಲಿಗಟ್ಟಲಾಗಿತ್ತು. ಈ ಸಂಬಂಧ ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಧೀಶೆ ವಿಜಯಲಕ್ಷ್ಮೀ ವಿಹಾನ್​, ಅಪರಾಧಿಗೆ ಗಲ್ಲು ಶಿಕ್ಷೆ, ಆತನ ತಂದೆ ಪಾಪೂಗೆ 4 ವರ್ಷ ಜೈಲು ಹಾಗೂ ತಾಯಿ ರೂಪಾವತಿಗೆ 3 ವರ್ಷ ಜೈಲು ಶಿಕ್ಷೆಯನ್ನ ಪ್ರಕಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...