alex Certify ನೀರ್ಗಲ್ಲು ಸ್ಫೋಟದ ಹಿಂದೆ ಚೀನಾ ಕೈವಾಡ…? ಬೆಚ್ಚಿಬೀಳಿಸುವಂತಿದೆ ತಜ್ಞರ ಅಭಿಪ್ರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರ್ಗಲ್ಲು ಸ್ಫೋಟದ ಹಿಂದೆ ಚೀನಾ ಕೈವಾಡ…? ಬೆಚ್ಚಿಬೀಳಿಸುವಂತಿದೆ ತಜ್ಞರ ಅಭಿಪ್ರಾಯ

ನೆರೆಯ ರಾಷ್ಟ್ರ ಚೀನಾ ಭಾರತದೊಂದಿಗೆ ಸದಾಕಾಲ ಕ್ಯಾತೆ ತೆಗೆಯುತ್ತಲೇ ಬಂದಿದೆ. ಭಾರತದ ಭೂಭಾಗವನ್ನು ಚೀನಾ ಸೈನಿಕರು ಆಕ್ರಮಿಸಿಕೊಂಡ ವೇಳೆ ಗಡಿಯಲ್ಲಿ ಉಭಯ ದೇಶಗಳ ನಡುವೆ ಚಕಮಕಿ ನಡೆದಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಚೀನಾ ಮೂಲದ ಹಲವು ಅಪ್ಲಿಕೇಶನ್ ಗಳನ್ನು ನಿಷೇಧಿಸುವ ಮೂಲಕ ಆರ್ಥಿಕವಾಗಿ ಪೆಟ್ಟು ನೀಡಿತ್ತು.

ಇದರ ಮಧ್ಯೆ ಈಗ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮ ಪ್ರವಾಹ ಉಂಟಾಗಿದ್ದು, ಅದಕ್ಕೆ ಈಗಾಗಲೇ 30ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದೀಗ ಚಳಿಗಾಲದಲ್ಲಿ ನೀರ್ಗಲ್ಲು ಕರಗಿ ಸರೋವರ ಸ್ಪೋಟಿಸಿರುವುದು ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಹಿಮಾಲಯ ಪರ್ವತಗಳಲ್ಲಿ ಚೀನಾ ನಡೆಸುತ್ತಿರುವ ವಿವಿಧ ಪ್ರಯೋಗಗಳು ನೀರ್ಗಲ್ಲು ಸ್ಪೋಟಕ್ಕೆ ಕಾರಣವಿರಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

BREAKING NEWS: ತೀವ್ರ ವಿರೋಧದ ನಡುವೆಯೂ ಪರಿಷತ್ ನಲ್ಲಿ ಗೋಹತ್ಯೆ ನಿಷೇಧ ಬಿಲ್ ಪಾಸ್

ಸಾಮಾನ್ಯವಾಗಿ ಚಳಿಗಾಲದಲ್ಲಿ ನೀರ್ಗಲ್ಲು ಸ್ಪೋಟವಾಗುವುದು ಅಸಾಧ್ಯವೆಂದು ಅಭಿಪ್ರಾಯ ಪಡುತ್ತಿರುವ ತಜ್ಞರು, ಇದೀಗ ಸ್ಫೋಟದ ಹಿಂದಿನ ಕಾರಣ ತಿಳಿಯಲು ಇಸ್ರೋ ನೆರವನ್ನು ಪಡೆಯಲು ಮುಂದಾಗಿದ್ದಾರೆ. ಉತ್ತರಾಖಂಡದ ಹಿಮ ಪ್ರವಾಹದಿಂದ ತಪೋವನ ವಿದ್ಯುತ್ ಘಟಕ ಸಂಪೂರ್ಣ ಧ್ವಂಸವಾಗಿದೆ. ಅಲ್ಲದೆ ರಿಷಿ ಗಂಗಾ ವಿದ್ಯುತ್ ಸ್ಥಾವರಕ್ಕೂ ತೀವ್ರ ಹಾನಿಯಾಗಿದ್ದು, ಇದೆಲ್ಲವೂ ಮತ್ತೆ ಸುವ್ಯವಸ್ಥೆಗೆ ಬರಲು ಹಲವು ಕಾಲ ಬೇಕಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...